ಇಂದಿರಾ ಎಜುಕೇಶನ್ ಟ್ರಸ್ಟ್ ಅಧೀನ ಕಾಲೇಜುಗಳ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ

ಮಂಗಳೂರು: ನಗರದ ಫಳ್ನೀರ್ ನಲ್ಲಿರುವ ಇಂದಿರಾ ಎಜುಕೇಶನ್‌ ಟ್ರಸ್ಟ್ ಇದರ ಅಧೀನ ಕಾಲೇಜುಗಳ ಪದವಿ ದಿನವನ್ನು ಎಪ್ರಿಲ್ 29 ಶನಿವಾರದಂದು ಮಂಗಳೂರಿನ ಮಿಲಾಗ್ರಿಸ್‌ ಜುಬಿಲಿ ಹಾಲ್‌ನಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ.ಎನ್.ರಾಮಕೃಷ್ಣರೆಡ್ಡಿ, ಗೌರವ ಅತಿಥಿಗಳಾಗಿ ಪ್ರೊ.ಡಾ.ಯು.ಟಿ. ಇಫ್ತಿಕರ್ ಅಲಿ, ಮಾಜಿ ಸಿಂಡಿಕೇಟ್ ಸದಸ್ಯ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು ಇವರು ಆಗಮಿಸಿದ್ದರು. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಗ್ರೀಶಾ ಜೋಸ್; ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲೆ ಡಾ.ಎನ್. […]