ಇಂಡಿಯನ್‌ ಐಡಲ್‌ 12ನೇ ಆವೃತ್ತಿ: ಉತ್ತರಾಖಂಡದ ಪವನ್‌ದೀಪ್ ವಿಜೇತ

ಮುಂಬೈ: ಜನಪ್ರಿಯ ರಿಯಾಲಿಟಿ ಶೋ ‘ಇಂಡಿಯನ್‌ ಐಡಲ್‌’ನ 12ನೇ ಆವೃತ್ತಿಯ ವಿಜೇತರಾಗಿ ಉತ್ತರಾಖಂಡದ ಪವನ್‌ದೀಪ್ ರಾಜನ್‌ ಹೊರಹೊಮ್ಮಿದ್ದಾರೆ. ಅರುಣಿತಾ ಕಾಂಜಿಲಾಲ್‌ ಹಾಗೂ ಸಾಯಲಿ ಕಾಂಬ್ಳೆ ಅವರು ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದ ನಿಹಾಲ್‌ ತಾವ್ರೊ ಅವರು 5ನೇ ಸ್ಥಾನ ಪಡೆದಿದ್ದಾರೆ. ಡ್ಯಾನಿಷ್‌ ಮೊಹ್ಮದ್‌, ಷಣ್ಮುಖಪ್ರಿಯಾ ಅವರು ಕ್ರಮವಾಗಿ 4 ಹಾಗೂ 6ನೇ ಸ್ಥಾನ ಪಡೆದಿದ್ದಾರೆ.