ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ಅಡುಗೆ ಅನಿಲ (ಎಲ್ ಪಿಜಿ ಸಿಲಿಂಡರ್) ಬೆಲೆಯಲ್ಲಿ ಮತ್ತೆ ₹25 ರೂಪಾಯಿ ಎರಿಕೆಯಾಗಿದೆ. ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಎಲ್ ಪಿಜಿ ಸಿಲೆಂಡರ್ ಬೆಲೆ ಈಗ 859 ರೂಪಾಯಿ 5 ಪೈಸೆಯಾಗಿದೆ. ನಿನ್ನೆಯವರೆಗೆ 834 ರೂಪಾಯಿ 50 ಪೈಸೆಯಾಗಿತ್ತು. ಕಳೆದ ಜುಲೈ 1ರಂದು ಎಲ್ ಪಿಜಿ ಸಿಲೆಂಡರ್ ಬೆಲೆ 25 ರೂಪಾಯಿ 50 ಪೈಸೆ ಹೆಚ್ಚಳವಾಗಿತ್ತು. ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಎಲ್ ಪಿಜಿ ಸಿಲೆಂಡರ್ ಬೆಲೆ 862 ರೂಪಾಯಿ 50 ಪೈಸೆಯಾಗಿದೆ. […]