ಸಾಮಾಜಿಕ ಜಾಲತಾಣದಲ್ಲಿ ದೇಶವಿರೋಧಿ, ಸಮಾಜ ವಿರೋಧಿ ಪೋಸ್ಟ್ ಇದ್ದರೆ ಪಾಸ್ ಪೋರ್ಟ್ ಸಿಗಲ್ಲ

ಡೆಹ್ರಾಡೂನ್: ಸಾಮಾಜಿಕ ಜಾಲತಾಣದಲ್ಲಿ ದೇಶವಿರೋಧಿ, ಸಮಾಜ ವಿರೋಧಿ ಪೋಸ್ಟ್ ಹಾಕುವವರಿಗೆ ಪಾಸ್ ಪೋರ್ಟ್ ನೀಡದಿರಲು ಉತ್ತರಾಖಂಡ್ ಪೊಲೀಸರು ಚಿಂತಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿರೋಧಿ, ಸಮಾಜ ವಿರೋಧಿ ಪೋಸ್ಟ್ ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ್ ಪೊಲೀಸರು ಇಂತಹದ್ದೊಂದು ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ವ್ಯಕ್ತಿಯೋರ್ವನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ದೇಶವಿರೋಧಿ, ಸಮಾಜ ವಿರೋಧಿ ಪೋಸ್ಟ್ ಗಳು ಪದೇ ಪದೇ ಕಂಡುಬಂದಲ್ಲಿ ಅಂತಹ ವ್ಯಕ್ತಿಗೆ ಇನ್ನು ಮುಂದೆ ಪಾಸ್ಪೋರ್ಟ್ ಪಡೆಯುವುದು, ಶಸ್ತ್ರಾಸ್ತ್ರ ಪರವಾನಗಿ ಪಡೆಯುವುದು ಕಷ್ಟವಾಗಲಿದೆ. ರಾಜ್ಯ ಪೊಲೀಸ್ ಅಧಿಕಾರಿಗಳ […]