ಮಾತೃದಿನದಂದು ಇಡ್ಲಿ ಅಮ್ಮನಿಗೆ ಹೊಸ ಮನೆ ಉಡುಗೊರೆ ನೀಡಿದ ಆನಂದ್ ಮಹೀಂದ್ರಾ!

2019 ರ ಕೊರೋನಾ ಕಾಲದಲ್ಲಿ ‘ಇಡ್ಲಿ ಅಮ್ಮಾ’ ಎಂದೂ ಕರೆಯಲ್ಪಡುವ ಕೆ ಕಮಲಾತಾಲ್ ಎಂಬ ಮಹಿಳೆ ಲಾಕ್‌ಡೌನ್ ಸಮಯದಲ್ಲಿ ಕೇವಲ 1 ರೂಪಾಯಿಗೆ ಇಡ್ಲಿಗಳನ್ನು ಮಾರಾಟ ಮಾಡುವ ಮೂಲಕ ಮನೆ ಮಾತಾಗಿದ್ದರು. 85 ವರ್ಷ ವಯಸ್ಸಿನ ಈಕೆ ಕಳೆದ ಮೂವತ್ತು ವರ್ಷಗಳಿಂದ ಈ ಕಾಯಕದಲ್ಲಿ ನಿರತರಾಗಿದ್ದಾರೆ. ಅವರ ಬಗ್ಗೆ ವರದಿಗಳು ವೈರಲ್ ಆದ ಬಳಿಕ ದೇಶದ ಹೆಸರಾಂತ ಉದ್ಯಮಿ ಆನಂದ್ ಮಹೀಂದ್ರಾ ಆಕೆಯ ಸಮರ್ಪಣೆಯಿಂದ ಪ್ರಭಾವಿತರಾಗಿ ಆಕೆಗೊಂದು ಮನೆ ನಿರ್ಮಿಸಿಕೊಡುವ ವಾಗ್ದನ ಮಾಡಿದ್ದರು. ತನ್ನ ವಾಗ್ದಾನಕ್ಕೆ ಬದ್ದರಾದ […]