UPSC ಫಲಿತಾಂಶ: ದೇಶಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ ಆದಿತ್ಯ ಶ್ರೀವಾಸ್ತವ

ದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇತ್ತೀಚೆಗೆ 2023 ರ ಸಿವಿಲ್ ಸರ್ವೀಸಸ್ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿತು, ಅಲ್ಲಿ ವಿದ್ಯಾರ್ಥಿ ಆದಿತ್ಯ ಶ್ರೀವಾಸ್ತವ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. UPSC ಟಾಪರ್ ಆದಿತ್ಯ ಶ್ರೀವಾಸ್ತವ ಉತ್ತರ ಪ್ರದೇಶದ ಲಕ್ನೋ ನಿವಾಸಿ. ಲಕ್ನೋದ ಸಿಟಿ ಮಾಂಟೆಸ್ಸರಿ ಶಾಲೆ (CMS) ನಲ್ಲಿ 12 ನೇ ವರೆಗೆ ಓದಿದ್ದಾರೆ. 2021 ರಲ್ಲಿ, ಆದಿತ್ಯ ಯುಪಿಎಸ್‌ಸಿಯಲ್ಲಿ 485 ನೇ ಸ್ಥಾನ ಗಳಿಸಿದ್ದರು. ಆದಿತ್ಯ ಶ್ರೀವಾಸ್ತವ ಪ್ರಥಮ ಸ್ಥಾನ ಗಳಿಸಿದ್ದು, ಅನಿಮೇಶ್ ಪ್ರಧಾನ್ ಮತ್ತು […]

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಇಲಾಖಾ ತನಿಖೆಗೆ ಆದೇಶ ನೀಡಿದ ಸರ್ಕಾರ

ಬೆಂಗಳೂರು: 2018-19ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಸ್ಪಂದಿಸಿ ಸರ್ಕಾರ ನಿರ್ಣಾಯಕ ಕ್ರಮ ಕೈಗೊಂಡಿದೆ. ಮೈಸೂರು ಡಿಸಿ ನಿವಾಸದ ನವೀಕರಣ ಮತ್ತು ಬಟ್ಟೆ ಮತ್ತು ಬ್ಯಾಗ್‌ಗಳ ಖರೀದಿಯಲ್ಲಿ ನಡೆದಿರುವ ಅಕ್ರಮದ ಆರೋಪದ ಬಗ್ಗೆ ತನಿಖೆ ನಡೆಸಲು ಅಧಿಕೃತ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಈ ಆರೋಪಗಳ ತನಿಖೆಯು ನವೆಂಬರ್ 24, 2022 ರಲ್ಲಿ ಪ್ರಾರಂಭವಾಗಿದ್ದು, ಪ್ರಾಥಮಿಕ ವಿಚಾರಣೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈ ಪೂರ್ವಭಾವಿ ತನಿಖೆಯ […]

ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ: ಜುಲೈ 10 ರಂದು ತ್ರಿಶಾ ಅಡ್ಮಿಶನ್ ಟೆಸ್ಟ್

ಉಡುಪಿ: ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾದ ವಾಣಿಜ್ಯ, ವಿಜ್ಞಾನ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ತ್ರಿಶಾ ಅಡ್ಮಿಶನ್ ಟೆಸ್ಟ್ (ಟಿಎಟಿ) ಪರೀಕ್ಷೆ ಜು.10 ರಂದು ನಡೆಯಲಿದೆ. ಸಾಮಾನ್ಯ ಜ್ಞಾನದ ಜತೆಗೆ ವಾಣಿಜ್ಯ ವಿಷಯಗಳ ಅರಿವನ್ನು ಪರೀಕ್ಷಿಸುವುದರೊಂದಿಗೆ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಮತ್ತು ಬುದ್ದಿವಂತಿಕೆಯನ್ನು ಅರಿಯಲು ಈ ಪರೀಕ್ಷೆ ಸಹಕಾರಿಯಾಗಲಿದೆ. ಎಂಬಿಎ ಪ್ರವೇಶ ಪರೀಕ್ಷೆ, ಐಎಎಸ್, ಸಿಎ, ಸಿಎಸ್, ಬ್ಯಾಂಕಿಂಗ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗಲಿದೆ. ಯಶಸ್ವಿಯಾಗಿ ನಡೆಸಲಾದ ಟಿಎಟಿ – 1 ದ್ವಿತೀಯ ಪಿಯುಸಿಯ […]