ಸುಖೋಯ್ ಯುದ್ದವಿಮಾನದಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ತಮ್ಮ ಚೊಚ್ಚಲ ಫೈಟರ್ ಜೆಟ್ ಹಾರಾಟ ನಡೆಸಿದರು. ಅಸ್ಸಾಂನ ಆಯಕಟ್ಟಿನ ವಾಯುನೆಲೆಯಾದ ತೇಜ್‌ಪುರ್ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ಸುಖೋಯ್ 30 MKI ಯುದ್ಧ ವಿಮಾನದಲ್ಲಿ ದ್ರೌಪದಿ ಮುರ್ಮು ಹಾರಾಟ ನಡೆಸಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿಗಳು, ಬ್ರಹ್ಮಪುತ್ರ ಮತ್ತು ತೇಜ್‌ಪುರ ಕಣಿವೆಯ ಮೇಲೆ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿ ವಾಯುಪಡೆಯ ನಿಲ್ದಾಣಕ್ಕೆ ಮರಳಿದರು. ಹಾರಾಟದ ಬಗ್ಗೆ ಪ್ರತಿಕ್ರಿಯಿಸಿದ ಮುರ್ಮು, “ಅಚ್ಛಾ ಲಗಾ” ಎಂದಿದ್ದಾರೆ. […]
ಫೆ. 4 ಮತ್ತು 7 ರಂದು ವಾಯುಸೇನೆ ಏರ್‌ಮ್ಯಾನ್ ಹುದ್ದೆಗಳ ನೇರ ನೇಮಕಾತಿ ರ‍್ಯಾಲಿ
ಉಡುಪಿ: ಭಾರತೀಯ ವಾಯುಪಡೆಯು ಭಾರತೀಯ ಮತ್ತು ಗೂರ್ಖಾ (ನೇಪಾಳ) ಪುರುಷ ಅಭ್ಯರ್ಥಿಗಳಿಂದ ಭಾರತೀಯ ವಾಯುಪಡೆಯ ವೈ (ತಾಂತ್ರಿಕೇತರ) ಗುಂಪಿನಲ್ಲಿ ವೈದ್ಯಕೀಯ ಸಹಾಯಕ ಮತ್ತು ವೈದ್ಯಕೀಯ ಸಹಾಯಕ (ಫಾರ್ಮಸಿ) ಗುಂಪಿನಲ್ಲಿ ಏರ್‌ಮ್ಯಾನ್ ಹುದ್ದೆಗಳ ನೇಮಕಾತಿಗೆ ಫೆಬ್ರವರಿ 4 ಮತ್ತು 7 ರಂದು ಚೆನ್ನೈ ಏರ್ ಫೋರ್ಸ್ ಸ್ಟೇಷನ್ ತಾಂಬರಂ ನಲ್ಲಿ ನೇರ ನೇಮಕಾತಿ ರ‍್ಯಾಲಿಯನ್ನು ಅಯೋಜಿಸಲಾಗಿದ್ದು, ಅರ್ಹ ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ವೈದ್ಯಕೀಯ ಸಹಾಯಕ ಹುದ್ದೆಗೆ ಅಭ್ಯರ್ಥಿಯು ಅವಿವಾಹಿತರಾಗಿರಬೇಕು ಮತ್ತು 27 ಜೂನ್ 2002 ಮತ್ತು 27 ಜೂನ್ […]
ಭಾರತೀಯ ವಾಯುಪಡೆಯ ಹೊಸ ಯುದ್ದ ಸಮವಸ್ತ್ರ ಅನಾವರಣ
ಚಂಡೀಗಢ: ಭಾರತೀಯ ವಾಯುಪಡೆಯು ಶನಿವಾರದಂದು ತನ್ನ 90 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹೊಸ ಯುದ್ಧ ಸಮವಸ್ತ್ರವನ್ನು ಅನಾವರಣಗೊಳಿಸಿದೆ. ವಾಯುಪಡೆಯಲ್ಲಿ ವೆಪನ್ ಸಿಸ್ಟಮ್ಸ್ (ಶಸ್ತ್ರಾಸ್ತ್ರ ವ್ಯವಸ್ಥೆ) ಶಾಖೆ ಎಂದು ಕರೆಯಲ್ಪಡುವ ಹೊಸ ಶಾಖೆಯನ್ನು ರಚಿಸಲು ಸರ್ಕಾರವು ಅನುಮೋದಿಸಿದೆ. ಎಲ್ಲಾ ಶಸ್ತ್ರಾಸ್ತ್ರ ವ್ಯವಸ್ಥೆ ನಿರ್ವಾಹಕರನ್ನು ಒಂದೇ ಘಟಕದ ಅಡಿಯಲ್ಲಿ ಏಕೀಕರಿಸುವ ಗುರಿಯನ್ನು ಇದು ಹೊಂದಿದೆ. ವಾಯುಪಡೆಯ ಹೊಸದಾಗಿ ವಿನ್ಯಾಸಗೊಳಿಸಿದ ಯುದ್ಧ ಟೀ ಶರ್ಟ್ ಅನ್ನು ಕೂಡಾ ಸೇನೆಗೆ ಸೇರ್ಪಡೆಗೊಳಿಸಲಾಗಿದೆ. Indian Air Force Day: New Combat Uniform unveiled!@IAF_MCC […]
ಬ್ರಹ್ಮೋಸ್ ಕ್ಷಿಪಣಿ ಆಕಸ್ಮಾತ್ ಪಾಕಿಸ್ತಾನಕ್ಕೆ ಉಡಾವಣೆ: ಭಾರತೀಯ ವಾಯುಪಡೆಯ ಮೂವರು ಅಧಿಕಾರಿಗಳು ಸೇವೆಯಿಂದ ವಜಾ
ನವದೆಹಲಿ: ಬ್ರಹ್ಮೋಸ್ ಕ್ಷಿಪಣಿಯನ್ನು ಪಾಕಿಸ್ತಾನಕ್ಕೆ ಆಕಸ್ಮಿಕವಾಗಿ ಉಡಾಯಿಸಿದ ಪ್ರಕರಣದಲ್ಲಿ ಭಾರತೀಯ ವಾಯುಪಡೆಯ ಮೂವರು ಅಧಿಕಾರಿಗಳ ಸೇವೆಯನ್ನು ಸರ್ಕಾರ ವಜಾಗೊಳಿಸಿದೆ. ಈ ವರ್ಷದ ಮಾರ್ಚ್‌ನಲ್ಲಿ ಈ ಘಟನೆ ನಡೆದಿತ್ತು. ಈ ವರ್ಷದ ಮಾರ್ಚ್ 9 ರಂದು ಆಕಸ್ಮಿಕವಾಗಿ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾಯಿಸಲಾಯಿತು. ಘಟನೆಯ ಜವಾಬ್ದಾರಿಯನ್ನು ನಿಗದಿಪಡಿಸುವುದು ಸೇರಿದಂತೆ ಪ್ರಕರಣದ ಸತ್ಯಗಳನ್ನು ಸ್ಥಾಪಿಸಲು ನ್ಯಾಯಾಲಯದ ಮೂಲಕ ವಿಚಾರಣೆಯನ್ನು ಮಾಡಲಾಯಿತು ಎಂದು ಭಾರತೀಯ ವಾಯುಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮೂವರು ಅಧಿಕಾರಿಗಳಿಂದ ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳಿಂದ ವಿಚಲನವು ಕ್ಷಿಪಣಿಯ ಆಕಸ್ಮಿಕ ಉಡಾವಣೆಗೆ […]
ಅಗ್ನಿಪಥ್ ನೇಮಕಾತಿ: ಜೂನ್ 24 ರಿಂದ ಭಾರತೀಯ ವಾಯುಪಡೆಯ ನೋಂದಣಿ ಪ್ರಕ್ರಿಯೆ ಆರಂಭ
ನವದೆಹಲಿ: ಭಾರತೀಯ ವಾಯುಪಡೆಯ ಅಗ್ನಿಪಥ್ ನೇಮಕಾತಿ ಯೋಜನೆಗೆ ನೋಂದಣಿಯು ಜೂನ್ 24 ರಿಂದ ಪ್ರಾರಂಭವಾಗಿ ಜುಲೈ 5ಕ್ಕೆ ಕೊನೆಗೊಳ್ಳಲಿದೆ. ಆನ್‌ಲೈನ್ ಪರೀಕ್ಷೆಯು ಜುಲೈ 24ರಂದು ಪ್ರಾರಂಭವಾಗಲಿದೆ. ಹೆಚ್ಚಿನ ವಿವರಗಳಿಗಾಗಿ ಆಕಾಂಕ್ಷಿಗಳು careerindianairforce.cdac.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅರ್ಹತೆ: 17.5 ವರ್ಷದಿಂದ 21 ವರ್ಷ ವಯಸ್ಸಿನ ಅಭ್ಯರ್ಥಿಗಳು ನೋಂದಣಿ ಮಾಡಬಹುದು. ಈ ವರ್ಷಕ್ಕೆ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ಏರಿಸಲಾಗಿದೆ. ಹೆಚ್ಚುವರಿ ಶೈಕ್ಷಣಿಕ ಅರ್ಹತೆಗಳು ಮತ್ತು ದೈಹಿಕ ಮಾನದಂಡಗಳು ಇದ್ದಲ್ಲಿ ಭಾರತೀಯ ವಾಯುಪಡೆಯು ಸೂಚಿಸಲಿದೆ. ಅಗ್ನಿವೀರ್ ಅಭ್ಯರ್ಥಿಗಳು […]