ಪೂಂಚ್‌ನಲ್ಲಿ ಐಎಎಫ್ ಬೆಂಗಾವಲು ಪಡೆ ಮೇಲೆ ಭಯೋತ್ಪಾದಕ ದಾಳಿ: ಒರ್ವ ಸಿಬ್ಬಂದಿ ಸಾವು; ಉಗ್ರರ ಶೋಧಕ್ಕೆ ಕಾರ್ಯಾಚರಣೆ

ಶ್ರೀನಗರ: ಮೇ 4 ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಐಎಎಫ್ ಬೆಂಗಾವಲು ಪಡೆ ಮೇಲೆ ನಡೆದ ದಾಳಿಯಲ್ಲಿ ಒಬ್ಬ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾರತೀಯ ವಾಯುಪಡೆ (ಐಎಎಫ್) ಬೆಂಗಾವಲು ಪಡೆ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭದ್ರತಾ ಸಿಬ್ಬಂದಿ ಇಂದು (ಮೇ 5) ಬೆಳಗ್ಗೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಎಎನ್‌ಐ ವರದಿಯ ಪ್ರಕಾರ ದಾಳಿಯ ಹೊಣೆ ಹೊತ್ತಿರುವ ಭಯೋತ್ಪಾದಕರನ್ನು ಪತ್ತೆ ಹಚ್ಚುವುದು ಶೋಧ ಕಾರ್ಯಾಚರಣೆಯ ಉದ್ದೇಶವಾಗಿತ್ತು […]

ತನ್ನ ಎರಡನೇ C295 ವಿಮಾನವನ್ನು ಸ್ವಾಗತಿಸಿದ ಭಾರತೀಯ ವಾಯುಪಡೆ: ಟಾಟಾ ಸಹಭಾಗಿತ್ವದಲ್ಲಿ ಮೇಕ್ ಇನ್ ಇಂಡಿಯಾಗೆ ದೊರಕಿತು ಬಲ

ನವದೆಹಲಿ: ಭಾರತೀಯ ವಾಯುಪಡೆಯು (IAF) ತನ್ನ ಎರಡನೇ C295 ವಿಮಾನವನ್ನು ಶುಕ್ರವಾರ ಸ್ವಾಗತಿಸಿತು. ವಾಯುಸೇನೆಯ ಹಳೆಯದಾದ Avro-748 ಫ್ಲೀಟ್ ಅನ್ನು ಬದಲಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದರು. ಸೆಪ್ಟೆಂಬರ್ 2021 ರಲ್ಲಿ, ಭಾರತವು ತನ್ನ ಏರ್ ಫ್ಲೀಟ್ ಅನ್ನು ಆಧುನೀಕರಿಸಲು 56 ಏರ್‌ಬಸ್ C295 ವಿಮಾನಗಳ ಖರೀದಿಯನ್ನು ಒಟ್ಟು 21,935 ಕೋಟಿ ರೂ.ಗಳೊಂದಿಗೆ ಅಂತಿಮಗೊಳಿಸಿತು. ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್ ನಿಂದ 56 ಆರ್ಡರ್ ಮಾಡಿದ ವಿಮಾನಗಳಲ್ಲಿ 16 ಅನ್ನು ಸ್ಪೇನ್‌ನ ಸೆವಿಲ್ಲೆಯಲ್ಲಿ ತಯಾರಿಸಲಾಗುವುದು […]

ಫೆಬ್ರವರಿ 6 ರ ಒಳಗೆ ವಾಯುಪಡೆ ನೇಮಕಾತಿಗಾಗಿ ಆನ್‌ಲೈನ್ ನೋಂದಣಿ ಸಲ್ಲಿಸಿ

ಉಡುಪಿ: ಅಗ್ನಿಪಥ್ ಯೋಜನೆಯಡಿ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಆನ್‌ಲೈನ್ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು. ಆಸಕ್ತ ಅರ್ಜಿದಾರರು ಫೆಬ್ರವರಿ 6 ರ ಒಳಗಾಗಿ ವೆಬ್‌ಸೈಟ್ http://agnipathvayu.cdac.in ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. 2004 ರ ಜನವರಿ 02 ಮತ್ತು 2007 ರ ಜುಲೈ 02 ನಡುವೆ ಜನಿಸಿರುವ, ಪಿ.ಯು.ಸಿ. ಮತ್ತು ಡಿಪ್ಲೋಮಾ ಯಾವುದೇ ವಿಷಯಗಳಲ್ಲಿ ಕನಿಷ್ಠ ಶೇ. 50 ಮತ್ತು ಇಂಗ್ಲೀಷ್ ವಿಷಯದಲ್ಲಿ ಶೇ. 50 ಅಂಕಗಳೊAದಿಗೆ ಉತ್ತೀರ್ಣರಾದ ಅವಿವಾಹಿತ ಯುವಕ- ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ […]

ಭಾರತೀಯ ವಾಯುಪಡೆ ನೇಮಕಾತಿ ನೋಂದಣಿಗೆ ಆ. 17 ಕೊನೆಯ ದಿನ

ಉಡುಪಿ: ಅಗ್ನಿಪಥ್ ಯೋಜನೆಯಡಿ ಭಾರತೀಯ ವಾಯುಪಡೆಯಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಆನ್‌ಲೈನ್ ಪರೀಕ್ಷೆಗೆ ಪೂರ್ವ ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಆಸಕ್ತ ಅವಿವಾಹಿತ ಯುವಕ ಹಾಗೂ ಯುವತಿಯರು ವೆಬ್‌ಸೈಟ್ http://agnipathvayu.cdac.in ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. 2003 ರ ಜೂನ್ 27 ರಿಂದ 2006 ರ ಡಿಸೆಂಬರ್ 27 ರ ನಡುವೆ ಜನಿಸಿರುವ, ಪಿಯುಸಿಯಲ್ಲಿ (ಕಲಾ, ಕಲೆ, ವಾಣಿಜ್ಯ, ವಿಜ್ಞಾನ, ಮತ್ತು ಡಿಪ್ಲೋಮಾ ಯಾವುದೇ ವಿಷಯಗಳಲ್ಲಿ) ಕನಿಷ್ಠ ಶೇ.50 ಮತ್ತು ಇಂಗ್ಲೀಷ್ ವಿಷಯದಲ್ಲಿ ಶೇ.50 ಅಂಕಗಳೊಂದಿಗೆ […]

ಆಪರೇಶನ್ ಕಾವೇರಿ: ರಾತ್ರಿ ದೃಷ್ಟಿ ಕನ್ನಡಕಗಳನ್ನು ಬಳಸಿ ಭಾರತೀಯರನ್ನು ಸುಡಾನ್ ನಿಂದ ಪಾರು ಮಾಡಿದ ಭಾರತೀಯ ವಾಯುಸೇನೆ

ನವದೆಹಲಿ: ಸುಡಾನ್‌ನ ಸೇನೆ ಮತ್ತು ಅರೆಸೇನಾಪಡೆಯು ಅಧಿಕಾರಕ್ಕಾಗಿ ಹಿಂಸಾಚಾರದಲ್ಲಿ ತೊಡಗಿದ್ದು, ಇದು 400 ಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡಿದೆ. ಹಿಂಸಾಚಾರ ಸಂತ್ರಸ್ತ ಸುಡಾನ್ ನಲ್ಲಿ ಕರ್ನಾಟಕವೂ ಸೇರಿದಂತೆ ಭಾರತದ ಹಲವಾರು ರಾಜ್ಯಗಳ ನಾಗರಿಕರು ಸಿಲುಕಿದ್ದು, ಸುಡಾನ್‌ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ರಕ್ಷಿಸಲು ಭಾರತವು “ಆಪರೇಷನ್ ಕಾವೇರಿ” ಅನ್ನು ಪ್ರಾರಂಭಿಸಿತು. ಶುಕ್ರವಾರ, ಸುಡಾನ್ ನಲ್ಲಿ ಸಿಕ್ಕಿಬಿದ್ದ 135 ಭಾರತೀಯರನ್ನು ಹೊತ್ತ ಸಿ-130ಜೆ ವಿಮಾನದ ಎರಡನೇ ಬ್ಯಾಚ್ ಬಿಕ್ಕಟ್ಟಿನ ರಾಷ್ಟ್ರದಿಂದ ನಿರ್ಗಮಿಸಿದೆ. #OperationKaveri#ModiHainToMumkinHain Salute to our brave officers […]