ಹೈದರಾಬಾದ್ ಪಾಲಿಕೆ ಚುನಾವಣೆ: ಬಿಜೆಪಿಗೆ ಭಾರಿ ಮುನ್ನಡೆ

ಹೈದರಾಬಾದ್: ಭಾರಿ ಜಿದ್ದಾಜಿದ್ದಿನಿಂದ ಕೂಡಿರುವ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌’ (ಜಿಎಚ್‌ಎಂಸಿ) ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ ಭಾರೀ ಮುನ್ನಡೆ ಸಾಧಿಸಿದೆ. ಒಟ್ಟು 150 ವಾರ್ಡ್‌ಗಳ ಜಿಎಚ್‌ಎಂಸಿ ಚುನಾವಣೆಗೆ ಡಿ.1ರಂದು ಮತದಾನ ನಡೆದಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಮತಪತ್ರ (ಬ್ಯಾಲೆಟ್ ಪೇಪರ್) ಗಳನ್ನು ಬಳಸಿ ಚುನಾವಣೆ ನಡೆಸಲಾಗಿತ್ತು. ಒಟ್ಟು 1,122 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹೈದರಾಬಾದ್‌ ಅನ್ನು ಭಾಗ್ಯನಗರವಾಗಿ ಮರುನಾಮಕರಣ ಮಾಡುವ ವಿಚಾರಗಳು, ಹೈದರಾಬಾದ್‌ ಅನ್ನು ನಿಜಾಮ ಸಂಸ್ಕೃತಿಯಿಂದ ಹೊರತರವು ಬಿಜೆಪಿ ಹೇಳಿಕೆಗಳು ಈ ಬಾರಿಯ ಚುನಾವಣೆಯನ್ನು ಕದನಕುತೂಹಲಗೊಳಿಸಿವೆ. ಆಡಳಿತಾರೂಢ […]