ಮಥೀಷ ಪತಿರಾಣ ಸ್ಥಾನಕ್ಕೆ ಅನುಭವಿ ಆಲ್​ರೌಂಡರ್ ಏಂಜಿಲೊ ಮ್ಯಾಥ್ಯೂಸ್ : ವಿಶ್ವಕಪ್ 2023​

ಹೈದರಾಬಾದ್​: ಭುಜದ ಗಾಯಕ್ಕೆ ತುತ್ತಾಗಿರುವ ಶ್ರೀಲಂಕಾದ ವೇಗಿ ಮಥೀಷ ಪಥಿರಾಣ ಪಂದ್ಯಗಳಿಂದ ಹೊರಗುಳಿದಿದ್ದು, ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಅನುಭವಿ ಆಲ್​ರೌಂಡರ್​ ಏಂಜೆಲೊ ಮ್ಯಾಥ್ಯೂಸ್​ ತಂಡ ಸೇರಿಕೊಂಡಿದ್ದಾರೆ.ವಿಶ್ವಕಪ್​ ಟೂರ್ನಿಯಲ್ಲಿ ಕಳಪೆ ಫಾರ್ಮ್​ನಿಂದ ಕಂಗೆಟ್ಟಿರುವ ಶ್ರೀಲಂಕಾಗೆ ಆಟಗಾರರ ಗಾಯದ ಸಮಸ್ಸೆ ಕೂಡ ಜೋರಾಗಿ ಕಾಡುತ್ತಿದೆ.ಭುಜದಗಾಯಕ್ಕೆ ತುತ್ತಾಗಿರುವ ಶ್ರೀಲಂಕಾದ ವೇಗಿ ಮಥೀಷ ಪತಿರಾಣ ಸ್ಥಾನಕ್ಕೆ ಬದಲಿ ಆಟಗಾರನಾಗಿ ಅನುಭವಿ ಆಲ್​ರೌಂಡರ್​ ಆಯ್ಕೆಯಾಗಿದ್ದಾರೆ. 36 ವರ್ಷದ ಮ್ಯಾಥ್ಯೂಸ್​ಗೆ ಇದು ನಾಲ್ಕನೇ ವಿಶ್ವಕಪ್​ ಆಗಿದೆ. ಶ್ರೀಲಂಕಾ ಪರ 221 ಪಂದ್ಯಗಳನ್ನು ಆಡಿರುವ ಅವರು […]