ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿಕೆ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಿದ ಭಾರತೀಯ ಜನತಾ ಪಕ್ಷ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಭಾರೀ ರಾಜಕೀಯ ಬಿರುಗಾಳಿ ಎಬ್ಬಿಸಿರುವ ‘ಕರ್ನಾಟಕದ ಸಾರ್ವಭೌಮತ್ವ’ ಕುರಿತು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ನೀಡಿದ ಹೇಳಿಕೆ ವಿರುದ್ಧ ಭಾರತೀಯ ಜನತಾ ಪಕ್ಷ ಸೋಮವಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಶನಿವಾರದಂದು ಸೋನಿಯಾ ಗಾಂಧಿ ಅವರು ಕರ್ನಾಟಕದ ಹುಬ್ಬಳ್ಳಿ ಜಿಲ್ಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಪೋಸ್ಟ್ ಈ ಬಗ್ಗೆ ಪೋಸ್ಟ್ ಮಾಡಿ, “ಸಿಪಿಪಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಜಿ 6.5 ಕೋಟಿ ಕನ್ನಡಿಗರಿಗೆ […]
ಧರ್ಮದ ಆಧಾರದ ಮೇಲೆ ಮೀಸಲಾತಿ ಅಸಂವಿಧಾನಿಕ: ಅಮಿತ್ ಶಾ
ಹುಬ್ಬಳ್ಳಿ: ಧರ್ಮದ ಆಧಾರದ ಮೇಲೆ ಮೀಸಲಾತಿ ಅಸಂವಿಧಾನಿಕ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ ಮತ್ತು ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಅಳವಡಿಸಿಕೊಂಡ ಕೋಟಾ ಸೂತ್ರವನ್ನು ಬಿಜೆಪಿ ಜಾರಿಗೆ ತರಲಿದೆ ಎಂದು ಭರವಸೆ ನೀಡಿದರು. ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಧರ್ಮದ ಆಧಾರದ ಮೇಲೆ ಮೀಸಲಾತಿ ಅಸಂವಿಧಾನಿಕವಾಗಿದೆ ಮತ್ತು ಸಂವಿಧಾನದ ಅಡಿಯಲ್ಲಿ ಅದಕ್ಕೆ “ಅನುಮತಿ” ಎಂದಿಗೂ ಇರುವುದಿಲ್ಲ ಎಂದರು. ಒಬಿಸಿ ಅಡಿಯಲ್ಲಿ ಇರುವ ಮುಸ್ಲಿಂ ಸಮುದಾಯದ ವರ್ಗಗಳಿಗೆ ನಾವು ಇಂದಿಗೂ […]
ದುರ್ಗಾ ವೇಷ ಧರಿಸಿ ರಸ್ತೆ ಗುಂಡಿಯಲ್ಲಿ ನಡೆದ ಬಾಲಕಿ: ಹುಬ್ಬಳ್ಳಿಯ ನಗರ ಪಾಲಿಕೆ ಗಮನ ಸೆಳೆಯಲು ವಿನೂತನ ವಿಧಾನ
ಹುಬ್ಬಳ್ಳಿ: 2ನೇ ತರಗತಿಯ ಬಾಲಕಿಯೊಬ್ಬಳು ನವರಾತ್ರಿಯ ವೇಳೆ ದುರ್ಗೆಯ ವೇಷ ಧರಿಸಿ ಇಲ್ಲಿನ ಕೊಚ್ಚೆ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ನಡೆದಿದ್ದಾಳೆ. ಹುಬ್ಬಳ್ಳಿಯ ರಸ್ತೆಗಳ ದುರವಸ್ಥೆಯ ಬಗ್ಗೆ ಗಮನ ಸೆಳೆಯುವ ನಿಟ್ಟಿನಲ್ಲಿ ಆಕೆ ಈ ಕ್ರಮ ಕೈಗೊಂಡಿದ್ದಾಳೆ. 9 ವರ್ಷದ ಹರ್ಷಿತಾ ಎಂದು ಗುರುತಿಸಲಾದ ಬಾಲಕಿಯು ದುರ್ಗೆಯ ವೇಷ ಧರಿಸಿ ಮಳೆನೀರಿನ ಕೊಚ್ಚೆ, ಕೆಸರಿನಿಂದ ತುಂಬಿರುವ ಹೊಂಡಗಳಿಂದ ಕೂಡಿದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೀಡಿಯೋ ಒಂದು ಹರಿದಾಡುತ್ತಿದೆ. ಕೆಸರಿನ ನೀರಿನಿಂದ ತುಂಬಿದ ಅಂತಹ ಒಂದು ಗುಂಡಿಯ ಮಧ್ಯದಲ್ಲಿ ಆಕೆ […]
ಸರಳವಾಸ್ತು ಚಂದ್ರಶೇಖರ್ ಗುರೂಜಿ ಹತ್ಯೆ: ಹಂತಕರು ಪೊಲೀಸ್ ಬಲೆಗೆ
ಹುಬ್ಬಳ್ಳಿ: ಮಂಗಳವಾರ ಹುಬ್ಬಳ್ಳಿಯ ಹೋಟೆಲ್‌ವೊಂದರಲ್ಲಿ ವಾಸ್ತು ತಜ್ಞ ಚಂದ್ರಶೇಖರ ಅಂಗಡಿ (ಚಂದ್ರಶೇಖರ ಗುರೂಜಿ) ಅವರನ್ನು ಚಾಕುವಿನಿಂದ ಇರಿದು ಕೊಂದ ಇಬ್ಬರು ಹಂತಕರನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ರಾಮದುರ್ಗದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಮಹಾಂತೇಶ ಶಿರೂರು ಮತ್ತು ಮಂಜುನಾಥ ಮರೆವಾಡ, ಚಂದ್ರಶೇಖರ ಗುರೂಜಿ ನಡೆಸುತ್ತಿದ್ದ ಸರಳ ವಾಸ್ತುವಿನ ಮಾಜಿ ಉದ್ಯೋಗಿಗಳಾಗಿದ್ದು, ಕಾರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಬೆಳಗಾವಿ ಪೊಲೀಸರ ಸಹಾಯದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಇಬ್ಬರೂ ಆರೋಪಿಗಳು ಮಂಗಳವಾರ ಮಧ್ಯಾಹ್ನ ಚಂದ್ರಶೇಖರ ಗುರೂಜಿ […]
ಖ್ಯಾತ ವಾಸ್ತು ತಜ್ಞ, ಚಂದ್ರಶೇಖರ್ ಗುರೂಜಿ ನಿರ್ಮಮ ಹತ್ಯೆ: 60 ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆ ಮಾಡಿ ಹಂತಕರು ಪರಾರಿ
ಹುಬ್ಬಳ್ಳಿ: ಸರಳ ವಾಸ್ತು ಮೂಲಕ ಜನಪ್ರಿಯರಾಗಿದ್ದ ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರನ್ನು ಹುಬ್ಬಳ್ಳಿಯ ಹೋಟೆಲ್‌ನಲ್ಲಿ ನಿರ್ಮಮವಾಗಿ ಹತ್ಯೆ ಮಾಡಲಾಗಿದೆ. ಹುಬ್ಬಳ್ಳಿಯ ಉಣಕಲ್ ಕೆರೆ ಬಳಿಯ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಭಕ್ತರ ಸೋಗಿನಲ್ಲಿ ಬಂದ ಹಂತಕರು ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈಗ ಕೃತ್ಯದ ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು ಕೊಲೆಯ ಘೋರತೆ ಅನಾವರಣಗೊಂಡಿದೆ. ಇಬ್ಬರು ವ್ಯಕ್ತಿಗಳು ಹೋಟೆಲ್ ಲಾಬಿಯಲ್ಲಿ ಕುಳಿತಿದ್ದ ಚಂದ್ರಶೇಖರ್ ಗುರೂಜಿಯ ಆಶೀರ್ವಾದ ಪಡೆಯುವಂತೆ ಬಂದು, ಇದ್ದಕ್ಕಿದ್ದಂತೆ ಇಬ್ಬರೂ ಚಾಕುವಿನಿಂದ ಬರ್ಬರವಾಗಿ ಹಲ್ಲೆ ಮಾಡಿ […]