ಆಂಧ್ರಪ್ರದೇಶದ ಹೌರಾ-ಚೆನ್ನೈ ಮಾರ್ಗದಲ್ಲಿ ರೈಲುಗಳ ಮಧ್ಯೆ ಡಿಕ್ಕಿ: 13 ಸಾವು; 50 ಜನರಿಗೆ ಗಾಯ
ಅಮರಾವತಿ: ಒಡಿಶಾದಲ್ಲಿ 280ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಮೂರು ರೈಲುಗಳ ಭೀಕರ ಡಿಕ್ಕಿ ನಡೆದ ತಿಂಗಳುಗಳ ಬಳಿಕ ಭಾನುವಾರದಂದು ಆಂಧ್ರಪ್ರದೇಶದ ಹೌರಾ-ಚೆನ್ನೈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಸಿಗ್ನಲ್ ಅನ್ನು ದಾಟಿ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 13 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಮಂದಿ ಗಾಯಗೊಂಡಿದ್ದಾರೆ. ವಿಶಾಖಪಟ್ಟಣದಿಂದ ಪಲಾಸಕ್ಕೆ ಹೋಗುತ್ತಿದ್ದ ವಿಶೇಷ ಪ್ಯಾಸೆಂಜರ್ ರೈಲು ಸಿಗ್ನಲ್ ಇಲ್ಲದ ಕಾರಣ ಕೊತ್ಸವತ್ಸಲ ಬಳಿಯ ಅಳಮಂಡ ಮತ್ತು ಕಂಟಕಪಲ್ಲಿ ನಡುವೆ ಹಳಿಗಳ ಮೇಲೆ ನಿಂತಿದ್ದು, ವೈಜಾಗ್-ರಾಯಗಡ ಪ್ಯಾಸೆಂಜರ್ ರೈಲು […]