ಒಣ ಕಸದಿಂದ ಆಟಿಕೆಗಳನ್ನು ತಯಾರಿಸುವ ವಿಶಿಷ್ಟ ಸ್ಪರ್ಧೆ: ಸ್ವಚ್ಛ ಟಾಯ್‌ಕಥಾನ್
ನವದೆಹಲಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕಸದಿಂದ ರಸ ಪರಿಕಲ್ಪನೆಯ ‘ಸ್ವಚ್ಛ ಟಾಯ್‌ಕಥಾನ್’ ಅನ್ನು ಸೋಮವಾರದಿಂದ ಪ್ರಾರಂಭಿಸಲಿದ್ದು, ಇದು ತ್ಯಾಜ್ಯದಿಂದ ಆಟಿಕೆಗಳನ್ನು ತಯಾರಿಸುವ ವಿಶಿಷ್ಟ ಸ್ಪರ್ಧೆಯಾಗಿದೆ. ಒಣ ತ್ಯಾಜ್ಯವನ್ನು ಬಳಸಿಕೊಂಡು ಆಟಿಕೆ ವಿನ್ಯಾಸಗಳಲ್ಲಿ ಹೊಸತನವನ್ನು ಹೊರತರಲು ಸ್ಪರ್ಧೆಯು ವ್ಯಕ್ತಿಗಳು ಮತ್ತು ಗುಂಪುಗಳಿಗೆ ಮುಕ್ತವಾಗಿರುತ್ತದೆ. ಒಣ ಕಸದಿಂದ ಆಟಿಕೆಗಳನ್ನು ತಯಾರಿಸುವ ವ್ಯಕ್ತಿ ಅಥವಾ ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸಮರ್ಥ ವಿನ್ಯಾಸಗಳು ಮತ್ತು ಕನಿಷ್ಠ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವ ಆಟಿಕೆಗಳ ಮೇಲೆ ಸ್ಪರ್ಧೆಯು ಗಮನ ಕೇಂದ್ರೀಕರಿಸಿದೆ. […]