ಹುಟ್ಟೂರಿನ ಗೌರವ ಕಲಾವಿದನಿಗೆ ಬಹಳ ಹೆಮ್ಮೆ ತರುವ ವಿಚಾರ: ಬಾಲಕೃಷ್ಣ ಶೆಟ್ಟಿ
ಅಜೆಕಾರು: ಅಮ್ಮನ ಪ್ರೀತಿ ಮತ್ತು ಹುಟ್ಟೂರಿನ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಒಬ್ಬ ಕಲಾವಿದನಿಗೆ ಹುಟ್ಟೂರಿನ ಗೌರವ ಬಹಳ ಹೆಮ್ಮೆ ತರುವ ವಿಚಾರ ಎಂದು ಅಜೆಕಾರು ಕಲಾಭಿಮಾನಿ ಬಳಗ ಅಧ್ಯಕ್ಷ ಮುಂಬಯಿ ಬಾಲಕೃಷ್ಣ ಶೆಟ್ಟಿ ಹೇಳಿದರು. ಅಜೆಕಾರು ರಾಮಮಂದಿರದಲ್ಲಿ ನಡೆದ ಪ್ರಾದೇಶಿಕ ಸಮಿತಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ನಿವೃತ್ತ ಶಿಕ್ಷಕ ಭಾಸ್ಕರ ಶೆಟ್ಟಿ ಕುಂಟಿನಿ ದೀಪ ಬೆಳಗಿ ನೂತನ ಸಮಿತಿಗೆ ಚಾಲನೆ ನೀಡಿದರು. ಉದ್ಯಮಿ ಅಜೆಕಾರು ವಿಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ವಿದ್ವಾಂಸ ಮತ್ತು ಅರ್ಥಧಾರಿ […]