ಯೂನಿಲಿವರ್ ಶ್ಯಾಂಪೂಗಳಲ್ಲಿ ಕ್ಯಾನ್ಸರ್ ಕಾರಕಗಳು ಪತ್ತೆ: ಅಮೇರಿಕಾದಲ್ಲಿ ಉತ್ಪನ್ನಗಳನ್ನು ಹಿಂಪಡೆದ ಸಂಸ್ಥೆ
ನ್ಯೂಯಾರ್ಕ್: ತನ್ನ ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯೂನಿಲಿವರ್ ಪಿಎಲ್ಸಿ ಕಂಪನಿಯು ಅಮೇರಿಕಾದಲ್ಲಿ ಡವ್ ಸೇರಿದಂತೆ ಏರೋಸಾಲ್ ಡ್ರೈ ಶ್ಯಾಂಪೂಗಳ ಜನಪ್ರಿಯ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ. ಭಾರತದಲ್ಲಿ ಇದು ಅತ್ಯಂತ ಚಿಕ್ಕ ಮಾರುಕಟ್ಟೆಯಾಗಿರುವುದರಿಂದ ಇದರ ಪರಿಣಾಮವು ಅತ್ಯಲ್ಪವಾಗಿರುತ್ತದೆ ಎಂದು ಡೋಲತ್ ಕ್ಯಾಪಿಟಲ್‌ನ ಉಪಾಧ್ಯಕ್ಷ ಸಚಿನ್ ಬೋಬಡೆ ಹೇಳಿದ್ದಾರೆ. ಬ್ಯುಸಿನೆಸ್ ಸ್ಟ್ಯಾಂಡರ್ಡ್‌ನಿಂದ ಪರಿಶೀಲಿಸಲ್ಪಟ್ಟಂತೆ ಉತ್ಪನ್ನವು ಭಾರತದಲ್ಲಿ ನೈಕಾ ಮತ್ತು ಅಮೆಜಾನ್ ನಲ್ಲಿ ಮಾರಾಟವಾಗುತ್ತಲೇ ಇದೆ. ಈ ಶ್ಯಾಂಪೂಗಳಲ್ಲಿ ಬೆಂಜೀನ್ ಎನ್ನುವ ಕ್ಯಾನ್ಸರ್ಕಾರಕ ಅಂಶವಿದ್ದು, ಇದು ಮಾನವನ ದೇಹವನ್ನು […]