ಮಂಗಳೂರು ಪ್ರವೇಶಿಸಿದ ಶೌರ್ಯ ರಥ ಯಾತ್ರೆ; ನಾಳೆ ಉಡುಪಿಯಲ್ಲಿ ಭವ್ಯ ಸಮಾರೋಪ

ಮಂಗಳೂರು: ಯುವ ಸಂಘಟನೆಬಜರಂಗದಳ ನೇತೃತ್ವದಲ್ಲಿ, ವಿಶ್ವ ಹಿಂದು ಪರಿಷತ್ತಿನ 60ನೇ ವರ್ಷಾಚರಣೆ ಪ್ರಯುಕ್ತ ಸೆ.25 ರಂದು ಚಿತ್ರದುರ್ಗದಲ್ಲಿ ಆರಂಭವಾದ ಶೌರ್ಯ ರಥ ಯಾತ್ರೆಯು ರಾಜ್ಯದ ನಾನಾ ಜಿಲ್ಲೆಗಳಲ್ಲಿ 1600 ಕಿ.ಮೀ. ಸಂಚರಿಸಿ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ನಡೆಸಿ ಇದೀಗ ಕರಾವಳಿ ಪ್ರವೇಶಿಸಿದ್ದು, ಪುತ್ತೂರು ಮತ್ತು ಬಂಟ್ವಾಳದಲ್ಲಿ ಯಶಸ್ವಿ ಸಮಾವೇಶಗಳನ್ನು ಮುಗಿಸಿ ಇಂದು ಮಂಗಳೂರು ನಗರ ಪ್ರವೇಶಿಸಿದೆ. ನಗರದ ಹೊರವಲಯದ ಅಡ್ಯಾರಿನಲ್ಲಿ ರಥಕ್ಕೆ ಭವ್ಯ ಸ್ವಾಗತ ಕೋರಲಾಯಿತು. ಅಪರಾಹ್ನ ನಗರದಲ್ಲಿ ರಥಯಾತ್ರೆ ನಡೆಯಲಿದ್ದು ಇದಕ್ಕಾಗಿ ಭರ್ಜರಿ ತಯಾರಿ ನಡೆಸಲಾಗಿದೆ. ನಗರ […]

ಅ.10 ರಂದು ಬೃಹತ್ ಹಿಂದೂ ಸಮಾಜೋತ್ಸವ: ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಭಾಗಿ

ಉಡುಪಿ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಉಡುಪಿ ಜಿಲ್ಲೆಯ ವತಿಯಿಂದ ಷಷ್ಠಿಪೂರ್ತಿ ಸಮಾರಂಭದ ಅಂಗವಾಗಿ ಅ.10 ರಂದು ಹಿಂದೂ ಸಮಾಜೋತ್ಸವ ಶೌರ್ಯ ಜಾಗರಣ ರಥಯತ್ರೆಯು ಎಂ.ಜಿ.ಎಂ ಕಾಲೇಜು ಮೈದಾನದಲ್ಲಿ ನಡೆಯಲಿದ್ದು ದೇಶದ ಪ್ರಖರ ಹಿಂದೂ ವಾಗ್ಮಿ ಭಾಗೇಶ್ವರ ಧಾಮ ಸರ್ಕಾರ್ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಭಾಗವಹಿಸಲಿದ್ದಾರೆ.