ಫೆ.14ರಿಂದ ಹೈಸ್ಕೂಲ್ ಆರಂಭ; ಸಿಎಂ ಬೊಮ್ಮಾಯಿ
ಬೆಂಗಳೂರು: ಹಿಜಾಬ್ ಮತ್ತು ಕೇಸರಿ ವಿವಾದ ಕುರಿತು ಹೈಕೋರ್ಟ್ ನಿಂದ ಮಧ್ಯಂತರ ಮೌಖಿಕ ಆದೇಶ ಹೊರಬಿದ್ದ ಬೆನ್ನಲ್ಲೇ ಮೊದಲ ಹಂತದಲ್ಲಿ ಇದೇ ಸೋಮವಾರದಿಂದ (ಫೆ.14) 8 ರಿಂದ 10 ರವರೆಗಿನ ತರಗತಿಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಎರಡನೇ ಹಂತದಲ್ಲಿ ಪಿಯುಸಿ ಮತ್ತು ಪದವಿ ಕಾಲೇಜುಗಳನ್ನು ಆರಂಭಿಸಲಾಗುವುದು. ಆದರೆ ಆ ಬಗ್ಗೆ ದಿನಾಂಕ ನಿರ್ಧರಿಸಿಲ್ಲ. ಸಮಯ ಬಂದಾಗ ಹೇಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.