ಹೆಮ್ಮಾಡಿ ಚತುಷ್ಪಥ ಅವೈಜ್ಙಾನಿಕ ಕಾಮಗಾರಿ ವಿರುದ್ದ ಸಿಡಿದೆದ್ದ ಜನತೆ:ಮೊದಲ ಹಂತದ ಪ್ರತಿಭಟನೆ. ಹೆಮ್ಮಾಡಿ ಪಂಚಾಯಿತಿಗೆ ಮುತ್ತಿಗೆ.

ಕುಂದಾಪುರ: ಹೆಮ್ಮಾಡಿ ಪೇಟೆಯಿಂದ ಜಾಲಾಡಿ ತನಕ ಸರ್ವೀಸ್ ರಸ್ತೆ ನಿರ್ಮಾಣ ಹಾಗೂ ಯೂಟರ್ನ್ ಬೇಡಿಕೆಯ ಈಡೇರಿಕೆಗಾಗಿ ದಾರಿಗಾಗಿ ಧ್ವನಿ ಹೋರಾಟ ಸಮಿತಿ ರಚನೆಗೊಂಡಿದ್ದು, ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಭಾನುವಾರ ಇಲ್ಲಿನ ಸಂತೋಷನಗರ ಬಸ್ ನಿಲ್ದಾಣ ಬಳಿಯ ಬಿಲ್ಲವ ಸಮಾಜ ಮಂದಿರ ವಠಾರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಸಂಪೂರ್ಣ ಅವೈಜ್ಙಾನಿಕವಾಗಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡದೆ […]