ದುಡಿಮೆಯ ನಡುವೆ ಅರಳುತ್ತಿರೋ ಈ ಹೂವಿಗೆ ಬೇಕಿದೆ ನೆರವಿನ ಕೈಗಳು: ಈ ಪ್ರತಿಭಾವಂತ ಹುಡುಗಿಯ ಪದವಿ ಕನಸು ನನಸು ಮಾಡುವಿರಾ?
ಮನೆಯ ಕಷ್ಟಕ್ಕೆ ಹೆಗಲೆಣೆಯಾಗಿ ದುಡಿಮೆ, ದುಡಿಮೆಯೊಂದಿಗೂ ಉಳಿಸಿಕೊಂಡ ಕಲಿಕೆಯ ಹಂಬಲ. ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ, ಧುತ್ತನೇ ಒದಗಿದ ಕೌಟುಂಬಿಕ ಸಂಕಷ್ಟದ ಸನ್ನಿವೇಶದಲ್ಲಿ ದುಡಿಯಲೇಬೇಕಾದ ಅನಿವಾರ್ಯತೆ ಈ ಹುಡುಗಿಗೆ. ಆದರೂ ದುಡಿಮೆ ನಡುವೆ ಕಲಿಯುವ ಹಂಬಲ ಕೈಬಿಡದೇ ದುಡಿದ ಇವಳು ಶೇ. 94 ಗಳಿಸಿದ್ದಾಳೆ. ಹೌದು. ಇದು ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಅಶ್ವಿನಿ ಅನ್ನೋ ಪ್ರತಿಭಾವಂತೆ ಹುಡುಗಿಯ ಕತೆ. ನಾಲ್ಕು ವರ್ಷಗಳ ಕಾಲ ಮುಂಬೈಯಲ್ಲಿ ಮೊಬೈಲ್ ಶಾಪ್ ನ ದುಡಿಮೆಯಲ್ಲೂ ಕಲಿಕೆಯ ಹಂಬಲ ಉಳಿಸಿಕೊಂಡ […]