ಹೆಬ್ರಿ: ವಾಲಿಬಾಲ್ ಆಟಗಾರ ನೇಣಿಗೆ ಶರಣು
ಹೆಬ್ರಿ: ವಾಲಿಬಾಲ್ ಆಟಗಾರನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ಕೆಳಪೇಟೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಹೆಬ್ರಿ ಕೆಳಪೇಟೆಯ ನಿವಾಸಿ 30 ವರ್ಷದ ಪ್ರಶಾಂತ್ ಯಾನೆ ಪಚ್ಚು ಎಂಬಾತ ನೇಣಿಗೆ ಶರಣಾದ ಯುವಕ. ಈತ ವಾದ್ಯ ನುಡಿಸುವ ಕೆಲಸ ಮಾಡುತ್ತಿದ್ದನು. ಅಲ್ಲದೆ, ಉತ್ತಮ ವಾಲಿಬಾಲ್ ಪಟು ಕೂಡ ಆಗಿದ್ದನು. ಹೆಬ್ರಿ ಎಪಿಟಿ ಹಾಗೂ ಎರ್ಲಪಾಡಿ ವಾಲಿಬಾಲ್ ಟೀಂಗಳಲ್ಲಿ ಆಡುತ್ತಿದ್ದನು ಎನ್ನಲಾಗಿದೆ. ಉತ್ತಮ ವಾಲಿಬಾಲ್ ಪೇಸರ್ ಕೂಡ ಆಗಿದ್ದನು. ಇತ್ತೀಚೆಗೆ ಪ್ರಶಾಂತ್ ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ಖಿನ್ನತೆಯಲ್ಲಿ ಚಿಕ್ಕಪ್ಪನ […]