ದುರ್ಗಾ ವೇಷ ಧರಿಸಿ ರಸ್ತೆ ಗುಂಡಿಯಲ್ಲಿ ನಡೆದ ಬಾಲಕಿ: ಹುಬ್ಬಳ್ಳಿಯ ನಗರ ಪಾಲಿಕೆ ಗಮನ ಸೆಳೆಯಲು ವಿನೂತನ ವಿಧಾನ

ಹುಬ್ಬಳ್ಳಿ: 2ನೇ ತರಗತಿಯ ಬಾಲಕಿಯೊಬ್ಬಳು ನವರಾತ್ರಿಯ ವೇಳೆ ದುರ್ಗೆಯ ವೇಷ ಧರಿಸಿ ಇಲ್ಲಿನ ಕೊಚ್ಚೆ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ನಡೆದಿದ್ದಾಳೆ. ಹುಬ್ಬಳ್ಳಿಯ ರಸ್ತೆಗಳ ದುರವಸ್ಥೆಯ ಬಗ್ಗೆ ಗಮನ ಸೆಳೆಯುವ ನಿಟ್ಟಿನಲ್ಲಿ ಆಕೆ ಈ ಕ್ರಮ ಕೈಗೊಂಡಿದ್ದಾಳೆ. 9 ವರ್ಷದ ಹರ್ಷಿತಾ ಎಂದು ಗುರುತಿಸಲಾದ ಬಾಲಕಿಯು ದುರ್ಗೆಯ ವೇಷ ಧರಿಸಿ ಮಳೆನೀರಿನ ಕೊಚ್ಚೆ, ಕೆಸರಿನಿಂದ ತುಂಬಿರುವ ಹೊಂಡಗಳಿಂದ ಕೂಡಿದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೀಡಿಯೋ ಒಂದು ಹರಿದಾಡುತ್ತಿದೆ. ಕೆಸರಿನ ನೀರಿನಿಂದ ತುಂಬಿದ ಅಂತಹ ಒಂದು ಗುಂಡಿಯ ಮಧ್ಯದಲ್ಲಿ ಆಕೆ […]