ಹ್ಯಾರಿ ಪಾಟರ್ ಹ್ಯಾಗ್ರಿಡ್ ಪಾತ್ರಧಾರಿ ರಾಬಿ ಕೋಲ್ಟ್ರೇನ್ ಇನ್ನಿಲ್ಲ

ಹ್ಯಾರಿ ಪಾಟರ್ ಚಲನಚಿತ್ರ ಸರಣಿಯಲ್ಲಿ ಹ್ಯಾಗ್ರಿಡ್ ಪಾತ್ರಕ್ಕೆ ಹೆಸರುವಾಸಿಯಾದ ರಾಬಿ ಕೋಲ್ಟ್ರೇನ್ ತಮ್ಮ 72 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ಐಟಿವಿ ಪತ್ತೇದಾರಿ ನಾಟಕ ಕ್ರ್ಯಾಕರ್ ಮತ್ತು ಜೇಮ್ಸ್ ಬಾಂಡ್ ಚಲನಚಿತ್ರಗಳಾದ ಗೋಲ್ಡನ್ ಐ ಮತ್ತು ದಿ ವರ್ಲ್ಡ್ ಈಸ್ ನಾಟ್ ಎನಫ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ರಾಬಿ ಅವರ ಏಜೆಂಟ್ ಬೆಲಿಂಡಾ ರೈಟ್ ಸ್ಕಾಟ್ಲೆಂಡ್‌ನ ಫಾಲ್ಕಿರ್ಕ್ ಬಳಿಯ ಆಸ್ಪತ್ರೆಯಲ್ಲಿ ನಟ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ. ರಾಬಿ ಒಂದು “ಅನನ್ಯ ಪ್ರತಿಭೆ” ಎಂದು ವಿವರಿಸಿದ ಅವರು, ಹ್ಯಾಗ್ರಿಡ್ ಪಾತ್ರದ ಮೂಲಕ […]