9 ತಿಂಗಳ ಗರ್ಭಿಣಿಯಿಂದ 44 ನೇ ಚೆಸ್ ಒಲಿಂಪಿಯಾಡ್ ನಲ್ಲಿ ಸಾಧನೆ: ಚೆಸ್ ಒಲಿಂಪಿಯಾಡ್ ನಲ್ಲಿ ಪದಕ ಗೆದ್ದ ಗ್ರ್ಯಾಂಡ್ ಮಾಸ್ಟರ್ ಹರಿಕಾ ದ್ರೋಣವಲ್ಲಿ
ಚೆನ್ನೈ: ಭಾರತದ ಗ್ರ್ಯಾಂಡ್ ಮಾಸ್ಟರ್ ಹರಿಕಾ ದ್ರೋಣವಲ್ಲಿ ಒಂಬತ್ತು ತಿಂಗಳ ಗರ್ಭಿಣಿ. ಆದರೆ ಸಾಧನೆ ಮಾಡಲೇ ಬೇಕೆನ್ನುವ ಛಲವಿದ್ದವರಿಗೆ ಯಾವುದೂ ಅಡ್ಡಿಯಾಗುವುದಿಲ್ಲ. ಮಂಗಳವಾರ ಮುಕ್ತಾಯಗೊಂಡ 44 ನೇ ಚೆಸ್ ಒಲಿಂಪಿಯಾಡ್‌ನಲ್ಲಿ ತಮ್ಮ ಕನಸನ್ನು ಸಾಧಿಸಿ ಬೀಗಿದ್ದಾರೆ ಗ್ರ್ಯಾಂಡ್ ಮಾಸ್ಟರ್ ಹರಿಕಾ. 31 ವರ್ಷ ವಯಸ್ಸಿನ ಹರಿಕಾ, ಆಗಸ್ಟ್ 10ರಂದು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಒಂಬತ್ತು ತಿಂಗಳ ಗರ್ಭಾವಸ್ಥೆಯಲ್ಲಿ ಈ ಸಾಧನೆ ಮಾಡಿದ ಕಾರಣ ಅದು ಹೆಚ್ಚು ಭಾವನಾತ್ಮಕವಾಗಿದೆ ಎಂದು ಅವರು ಹೇಳಿದ್ದಾರೆ. ಮಹಿಳೆಯರ ವಿಭಾಗದಲ್ಲಿ […]