ಅಭಿಮಾನಿಗಳು, ಪಕ್ಷ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಬೆಳ್ತಂಗಡಿ ಅಭ್ಯರ್ಥಿ ಹರೀಶ್ ಪೂಂಜಾ
ಬೆಳ್ತಂಗಡಿ: ಎರಡನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾದೆ. ಈ ಕ್ಷಣಗಳು ನಿಜಕ್ಕೂ ಅವಿಸ್ಮರಣೀಯವಾದುದು. ಬೆಳ್ತಂಗಡಿಗೆ ಬೆಳ್ತಂಗಡಿಯೇ ಸಂಭ್ರಮಿಸಿದ ದಿನವಿದು. ನವ ಬೆಳ್ತಂಗಡಿ ನಿರ್ಮಾಣದ ಕನಸು ಹೊತ್ತು ಮೊದಲ ಬಾರಿಗೆ 2018 ರಲ್ಲಿ ನಾಮಪತ್ರ ಸಲ್ಲಿಸಿದ್ದೆ. ಇಂದು 2023 ರಲ್ಲಿ ನವ ಬೆಳ್ತಂಗಡಿಯನ್ನು ಹೊಸ ಪರ್ವಕ್ಕೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ. ಇದು ಕೇವಲ ನಾಮಪತ್ರ ಸಲ್ಲಿಕೆಯ ದಿನವಲ್ಲ, ವಿಜಯ ಸಂಕಲ್ಪದ ದಿನ. ಮೇ 13 ರಂದು ಮತ್ತೊಮ್ಮೆ ಸಂಭ್ರಮಿಸುವ ಸಂಕಲ್ಪದೊಂದಿಗೆ ಮರಳಿದ್ದೇವೆ, […]