ಸುಪ್ರಸಿದ್ಧ ಗಾಯಕ ಹಾರಾಡಿ ಚಂದ್ರಶೇಖರ ಕೆದ್ಲಾಯ ವಿಧಿವಶ

ಹಾರಾಡಿ: ಸುಪ್ರಸಿದ್ಧ ಗಾಯಕ ಹಾರಾಡಿ ಚಂದ್ರಶೇಖರ ಕೆದ್ಲಾಯ ಇಂದು ಬೆಳಿಗ್ಗೆ10 ಗಂಟೆಯ ವೇಳೆಗೆ ತಮ್ಮ 73 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾಳೆ (ಜ.25) ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬಿಕರು ತಿಳಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿ ಹಾಗೂ ಅಪಾರ ಅಭಿಮಾನಿ ವರ್ಗ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.