ಮನೆ ಮನೆಗಗಳಲ್ಲಿ ತ್ರಿವರ್ಣ ಧ್ವಜ ಅಭಿಯಾನ: ಜಿಲ್ಲಾ ಬಿಜೆಪಿ ವತಿಯಿಂದ ರಾಷ್ಟ್ರಧ್ವಜ ವಿತರಣೆ
ಉಡುಪಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಹಾಗೂ ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೂಚನೆಯಂತೆ ‘ಮನೆ ಮನೆಗಗಳಲ್ಲಿ ತ್ರಿವರ್ಣ ಧ್ವಜ’ ಅಭಿಯಾನದ ಪ್ರಯುಕ್ತ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ನೇತೃತ್ವದಲ್ಲಿ ಜಿಲ್ಲೆಯ ಪ್ರಮುಖರನ್ನು ಭೇಟಿಯಾಗಿ ರಾಷ್ಟ್ರಧ್ವಜವನ್ನು ಹಸ್ತಾಂತರಿಸಲಾಯಿತು. ಮಣಿಪಾಲ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಹೆಚ್.ಎಸ್. ಬಲ್ಲಳ್, ಉಡುಪಿ ಜಿಲ್ಲಾ ಸಂಘ ಚಾಲಕ್ ನಾರಾಯಣ ಶೆಣೈ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಪದ ವಿದ್ವಾಂಸ ಬನ್ನಂಜೆ ಬಾಬು […]
ಆಗಸ್ಟ್ 9 ಮತ್ತು 14 ರಂದು ಅಂಚೆ ಕಚೇರಿಗಳಲ್ಲಿ ರಾಷ್ಟ್ರಧ್ವಜ ಖರೀದಿಗೆ ಅವಕಾಶ
ಉಡುಪಿ: ಅಂಚೆ ಇಲಾಖೆಯ ವತಿಯಿಂದ ಹರ್-ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಸಾರ್ವಜನಿಕರಿಗೆ ರಾಷ್ಟ್ರೀಯ ಧ್ವಜವನ್ನು ಖರೀದಿಸಲು ಅನುಕೂಲವಾಗುವಂತೆ ಆಗಸ್ಟ್ 9 ಹಾಗೂ 14 ರಂದು ಉಡುಪಿ ವಿಭಾಗದ ಎಲ್ಲಾ ಇಲಾಖಾ ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸಲಿದ್ದು, ಈ ಎರಡೂ ದಿನಗಳಲ್ಲಿ ತಿರಂಗಾ ವಿತರಣೆ ಮಾತ್ರ ನಡೆಯಲಿದ್ದು, ಇತರ ಯಾವುದೇ ವ್ಯವಹಾರಗಳು ಇರುವುದಿಲ್ಲ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
ಪ್ರಧಾನಿಯವರ ಹರ್ ಘರ್ ತಿರಂಗಾ ಅಭಿಯಾನದಿಂದ ಬದಲಾಯ್ತು ವ್ಯಾಪಾರಿಗಳ ಬದುಕು: ಇತಿಹಾಸದಲ್ಲೇ ದಾಖಲೆಯ ರಾಷ್ಟ್ರಧ್ವಜಗಳ ಮಾರಾಟ!
ನವದೆಹಲಿ: ದೇಶದ 75 ನೇ ಸ್ವಾಂತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದು, ರಾಷ್ಟ್ರಧ್ವಜ ಮಾರಾಟ ಮಾಡುವ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಬದುಕು ಹಸನಾಗಿದೆ. ಇತಿಹಾಸದಲ್ಲೇ ಅತಿ ಹೆಚ್ಚು ರಾಷ್ಟ್ರಧ್ವಜ ಮಾರಾಟವಾಗುತ್ತಿದ್ದು ವ್ಯಾಪಾರಿಗಳ ಮೊಗದಲ್ಲಿ ಸಂತಸ ಮನೆ ಮಾಡಿದೆ. ಹಿಂದೆಲ್ಲಾ ಜನರು ಒಂದೆರಡು ಧ್ವಜಗಳನು ಖರೀದಿಸುತ್ತಿದ್ದರು, ಆದರೆ ಹರ್ ಘರ್ ಅಭಿಯಾನದಿಂದಾಗಿ ಜನರು ಬೃಹತ್ ಆರ್ಡರ್ ಗಳನ್ನು ನೀಡುತ್ತಿದ್ದು, ಲಕ್ಷಗಟ್ಟಲೆ ಧ್ವಜಗಳು ಈಗಾಗಲೇ ಬಿಕರಿಯಾಗಿದ್ದು ಬೇಡಿಕೆ ಇನ್ನೂ ಹೆಚ್ಚುತ್ತಲೇ ಇದೆ. […]
ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಭಾಗವಹಿಸಿ ಸ್ವಾತಂತ್ರ‍್ಯ ಹೋರಾಟಕ್ಕೆ ನಿಜವಾದ ಗೌರವ ಸಲ್ಲಿಸಿ: ಸುನೀಲ್ ಕುಮಾರ್
ಉಡುಪಿ: ದೇಶಕ್ಕೆ ಸ್ವಾತಂತ್ಯ್ರ ಸಿಗುವಾಗ ನಾವ್ಯಾರೂ ಹುಟ್ಟಿರಲಿಲ್ಲ, ನಾವು ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಿಲ್ಲ, ಈಗ ಸ್ವಾತಂತ್ರ‍್ಯದ ಅಮೃತ ಮಹೋತ್ಸವದಲ್ಲಿ ಭಾಗವಹಿಸುವ ಸದವಕಾಶ ಸಿಕ್ಕಿದೆ. ಆದ್ದರಿಂದ 3 ದಿನಗಳ ಕಾಲ ಸಂಪೂರ್ಣವಾಗಿ ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಭಾಗವಹಿಸುವ ಮೂಲಕ ಸ್ವಾತಂತ್ರ‍್ಯ ಹೋರಾಟಕ್ಕೆ ನಿಜವಾದ ಗೌರವವನ್ನು ಸಲ್ಲಿಸಬೇಕು. ಪ್ರತಿಯೊಂದು ಮನೆಯಲ್ಲಿಯೂ ದೇವರ ಪೂಜೆಯಷ್ಟೇ ಗೌರವದಿಂದ ಮನೆಮಂದಿ ಸೇರಿ ಸಿಹಿ ವಿತರಿಸಿ ರಾಷ್ಟ್ರಗೀತೆ ಹಾಡಿ ಸಂಭ್ರಮದಿಂದ ಧ್ವಜಾರೋಹಣ ನಡೆಸಬೇಕು ಎಂದು ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ […]
ಸ್ವಾತಂತ್ರ್ಯ ದಿನದವರೆಗೆ ರಜಾದಿನಗಳಲ್ಲೂ ತೆರೆದಿರಲಿವೆ ಅಂಚೆ ಕಚೇರಿಗಳು: ಹರ್ ಘರ್ ತಿರಂಗ ಅಭಿಯಾನಕ್ಕಾಗಿ ವ್ಯವಸ್ಥೆ
ನವದೆಹಲಿ: ಹರ್ ಘರ್ ತಿರಂಗ ಅಭಿಯಾನದ ಅಡಿಯಲ್ಲಿ ರಾಷ್ಟ್ರೀಯ ಧ್ವಜಗಳ ಮಾರಾಟ ಮತ್ತು ವಿತರಣೆಗೆ ಅನುಕೂಲವಾಗುವಂತೆ ದೇಶದಾದ್ಯಂತ ಎಲ್ಲಾ ಅಂಚೆ ಕಛೇರಿಗಳು ಸ್ವಾತಂತ್ರ್ಯ ದಿನದ ಮೊದಲಿನ ಎಲ್ಲಾ ರಜಾದಿನಗಳಲ್ಲಿ ತೆರೆದಿರುತ್ತವೆ. ಈ ಬಗ್ಗೆ ಸಂಪರ್ಕ ಸಚಿವಾಲಯವು ಪ್ರಕಟಣೆ ಹೊರಡಿಸಿದ್ದು, ಈ ತಿಂಗಳ 7, 9 ಮತ್ತು 14 ರಂದು ಅಂಚೆ ಕಚೇರಿಗಳಲ್ಲಿ ಕನಿಷ್ಠ ಒಂದು ಕೌಂಟರ್ ಮೂಲಕ ರಾಷ್ಟ್ರಧ್ವಜಗಳ ಮಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದೆ. ಎಲ್ಲಾ ವಿತರಣಾ ಅಂಚೆ ಕಚೇರಿಗಳಲ್ಲಿ ರಾಷ್ಟ್ರೀಯ ಧ್ವಜಗಳನ್ನು ತಲುಪಿಸಲು […]