ಉಡುಪಿ ನಗರಸಭೆ ಬಳಿಯ ಹಾಜಿ ಬುಡಾನ್ ಶುಶ್ರೂಷಾಲಯ ಆವರಣದಲ್ಲಿ ತಾಜ್ಯಗಳ ರಾಶಿ; ವಿಲೇವಾರಿಗೆ ಆಗ್ರಹ
ಉಡುಪಿ: ಕವಿ ಮುದ್ದಣ ಮಾರ್ಗ ಇಲ್ಲಿಯ ನಗರಸಭೆ ಕಚೇರಿ ಬಳಿ ಇರುವ ಹಾಜಿ ಬುಡಾನ್ ಶುಶ್ರೂಷಾಲಯ ಕಟ್ಟಡದ ಕಂಪೌಂಡ್ ಒಳಗಿರುವ, ಮೇಲ್ಸೆತುವೆಗೆ ಹೋಗುವ ಸ್ಥಳದಲ್ಲಿ ಸಾರ್ವಜನಿಕರು ಕಸ ತಾಜ್ಯಗಳನ್ನು ಎಸೆಯುತ್ತಿರುವುದು ಕಂಡುಬಂದಿದೆ. ಇಲ್ಲಿ ಮದ್ಯದ ಬಾಟಲಿಗಳು, ಪ್ರಾಣಿಗಳ ಕಳೇಬರಗಳು, ಆಹಾರ ತಾಜ್ಯಗಳನ್ನು ಎಸೆಯಲಾಗುತ್ತಿದೆ. ಕಂಪೌಂಡ್ ಪಕ್ಕದಲ್ಲಿ ಪಾದಚಾರಿ ರಸ್ತೆ ಹಾದುಹೋಗತ್ತಿದ್ದು, ಇಲ್ಲಿ ಹರಡುತ್ತಿರುವ ವಾಸನೆಯಿಂದ ಸಾರ್ವಜನಿಕರು ಸಂಚರಿಸಲು ಅಸಾಧ್ಯ ಪರಿಸ್ಥಿತಿ ಎದುರಾಗಿದೆ. ಸೊಳ್ಳೆಗಳ ಉತ್ಪತ್ತಿಗೂ ಕಾರಣವಾಗಿದೆ. ನಗರಾಡಳಿತವು ಇಲ್ಲಿ ಸಂಗ್ರಹಗೊಂಡಿರುವ ಕಸ ತಾಜ್ಯಗಳನ್ನು ವಿಲೇವಾರಿಗೊಳಿಸಿ, ಮತ್ತೆ ತಾಜ್ಯಗಳನ್ನು […]