51ನೇ ರಾಷ್ಟ್ರೀಯ ಕ್ರೀಡಾಕೂಟ: ಉಡುಪಿ ಸ್ವಿಮ್ಮಿಂಗ್ ಕ್ಲಬ್ ನ ಈಜು ಪಟು ಅನಜ್ಞಾ ರಾಣಿಗೆ ಬೆಳ್ಳಿ ಪದಕ
ಉಡುಪಿ: ಉಡುಪಿ ಸ್ವಿಮ್ಮಿಂಗ್ ಕ್ಲಬ್ ನ ಈಜು ಪಟು ಕುಮಾರಿ ಅನಜ್ಞಾ ರಾಣಿ ಇವರು ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ನವೆಂಬರ್ 1ರಿಂದ 5 ರ ವರೆಗೆ ನಡೆದ ಕೇಂದ್ರೀಯ ವಿದ್ಯಾಲಯದ 51ನೇ ರಾಷ್ಟ್ರೀಯ ಕ್ರೀಡಾಕೂಟದ 14 ರ ವಯೋಮಿತಿಯ ಸ್ವಿಮ್ಮಿಂಗ್ ವಿಭಾಗದಲ್ಲಿ 100 ಮೀಟರ್ ಬ್ಯಾಕ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ, 4X100 ಮೀಟರ್ ಮೆಡ್ಲೆರಿಲೆ ಯಲ್ಲಿ ಬೆಳ್ಳಿಯ ಪದಕ ಹಾಗೂ 4X100ಮೀಟರ್ ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿಯ ಪದಕವನ್ನು ಪಡೆದು ಮುಂದಿನ ಹಂತಕ್ಕೆ ಆಯ್ಕೆಯಾಗಿರುತ್ತಾರೆ. […]