ಮಾಹೆ ಜಿಸಿಪಿಎಎಸ್ ನಲ್ಲಿ ಗಾಂಧಿ ಇಲ್ಲಸ್ಟ್ರೇಟೆಡ್ ಫಾರ್ ಕಿಡ್ಸ್ ಪುಸ್ತಕ ಬಿಡುಗಡೆ
ಮಣಿಪಾಲ: ಜಗತ್ತಿನ ಉಪಭೋಗವಾದದ ಮನೋಭಾವ ಪರಿಸರದ ಜೀವಾಳವನ್ನೇ ಭಕ್ಷಿಸುತ್ತಿರುವ ಮತ್ತು ಹಿಂಸಾಚಾರವು ವಿಪರೀತವಾಗುತ್ತಿರುವ ಈ ಕಾಲಕ್ಕೆ ಮಹಾತ್ಮ ಗಾಂಧಿಯವರು ಹೆಚ್ಚು ಪ್ರಸ್ತುತವಾಗುತ್ತಾರೆ ಎಂದು ಪರಿಸರವಾದಿ ಮಮತಾ ರೈ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಬಹುರೂಪಿ ಮತ್ತು ವಿವಿಡ್ ಲಿಪಿ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಕಲಾವಿದ ಗುಜ್ಜಾರ್ ಅವರ ಮಕ್ಕಳಿಗಾಗಿ ಗಾಂಧಿ ಮತ್ತು ಗಾಂಧಿ ಇಲ್ಲಸ್ಟ್ರೇಟೆಡ್ ಫಾರ್ ಕಿಡ್ಸ್ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಇಂದು ಬಿಡುಗಡೆಯಾಗಿರುವ ಸಚಿತ್ರ ಪುಸ್ತಕಗಳು […]