ಮೂರನೇ ಹಂತದ ಮತದಾನ: ಗಾಂಧಿನಗರದಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ
ನವದೆಹಲಿ: ಲೋಕಸಭೆ ಚುನಾವಣೆಯ 3 ನೇ ಹಂತದ ಮತದಾನ ಮಂಗಳವಾರ ಆರಂಭವಾಗುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್‌ನ ಅಹಮದಾಬಾದ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಇಂದು ಮೂರನೇ ಹಂತದ ಮತದಾನ. ನಮ್ಮ ದೇಶದಲ್ಲಿ ‘ದಾನ’ಕ್ಕೆ ಹೆಚ್ಚಿನ ಮಹತ್ವವಿದ್ದು, ಅದೇ ಉತ್ಸಾಹದಲ್ಲಿ ದೇಶವಾಸಿಗಳು ಸಾಧ್ಯವಾದಷ್ಟು ಮತ ಚಲಾಯಿಸಬೇಕು. ಇನ್ನೂ 4 ಸುತ್ತಿನ ಮತದಾನ ಬಾಕಿ ಇದೆ” ಎಂದರು. ಗುಜರಾತಿನ ಮತದಾರನಾಗಿ ನಾನು ನಿಯಮಿತವಾಗಿ ಮತ ಚಲಾಯಿಸುವ ಏಕೈಕ […]
ಶ್ರೀ ಸೋಮನಾಥ ಟ್ರಸ್ಟ್ ನ ಅಧ್ಯಕ್ಷರಾಗಿ ಪ್ರಧಾನಿ ಮೋದಿ ಮರು ಆಯ್ಕೆ: ಅಧಿಕಾರಾವಧಿ ಐದು ವರ್ಷಗಳಿಗೆ ಏರಿಕೆ
ಅಹಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೆರಾವಲ್ ಬಳಿಯ ಐತಿಹಾಸಕ ಮಾನ್ಯತೆ ಇರುವ ಸೋಮನಾಥ ದೇವಾಲಯದ ಮಾಲೀಕತ್ವವನ್ನು ಹೊಂದಿರುವ ಧಾರ್ಮಿಕ ಚಾರಿಟೇಬಲ್ ಟ್ರಸ್ಟ್ ಆದ ಶ್ರೀ ಸೋಮನಾಥ ಟ್ರಸ್ಟ್ (ಎಸ್‌ಎಸ್‌ಟಿ) ನ ಅಧ್ಯಕ್ಷರಾಗಿ ಐದು ವರ್ಷಗಳ ಕಾಲದವರೆಗೆ ಆಯ್ಕೆಯಾಗಿದ್ದಾರೆ. ಗುಜರಾತ್‌ನ ಚಾರಿಟಿ ಕಮಿಷನರ್ ಇತ್ತೀಚೆಗೆ ಟ್ರಸ್ಟ್‌ನ ಕರಾರು ಪತ್ರಕ್ಕೆ ತಿದ್ದುಪಡಿಯನ್ನು ಅನುಮೋದಿಸಿದ ನಂತರ, ಎಸ್‌ಎಸ್‌ಟಿ ಅಧ್ಯಕ್ಷರ ಅಧಿಕಾರಾವಧಿಯು ಒಂದು ವರ್ಷಕ್ಕೆ ಬದಲಾಗಿ ಐದು ವರ್ಷಗಳಾಗಿರುತ್ತದೆ ಎಂದು ಟ್ರಸ್ಟಿಗಳು ತಿಳಿಸಿದ್ದಾರೆ. ಸೋಮವಾರ ಗಾಂಧಿನಗರದ ರಾಜಭವನದಲ್ಲಿ ಕರೆಯಲಾದ ಎಸ್‌ಎಸ್‌ಟಿಯ ಟ್ರಸ್ಟಿಗಳ […]
ಅಮೇರಿಕಾದ ಪೆಂಟಗನ್ ಅನ್ನು ಹಿಂದಿಕ್ಕಿದ ಸೂರತ್ ಡೈಮಂಡ್ ಬೋರ್ಸ್ ಕಟ್ಟಡ: ವಿಶ್ವದ ಅತಿದೊಡ್ಡ ಕಚೇರಿಯೆಂಬ ಹೆಗ್ಗಳಿಕೆ
ಗಾಂಧಿನಗರ: ಪ್ರಪಂಚದ ಸುಮಾರು 90% ವಜ್ರಗಳನ್ನು ಕತ್ತರಿಸಿ ಅವುಗಳಿಗೆ ಆಕಾರ ನೀಡುವ ಗುಜರಾತಿನ ಸೂರತ್ ನಗರವು ಹೊಸ ದಾಖಲೆಯನ್ನು ಬರೆದಿದೆ. ವಿಶ್ವದ ಅತಿದೊಡ್ಡ ಕಚೇರಿಯೆಂದು ಹೆಗ್ಗಳಿಕೆ ಹೊಂದಿರುವ ಸೂರತ್ ಡೈಮಂಡ್ ಬೋರ್ಸ್ ಕಟ್ಟಡ ಅಮೇರಿಕಾದ ಪೆಂಟಗನ್ ಅನ್ನು ಹಿಂದಿಕ್ಕಿದೆ. ವಜ್ರದ ಬೃಹತ್ ಉದ್ಯಮವನ್ನು ಇನ್ನು ಮುಂದೆ ಸೂರತ್ ಡೈಮಂಡ್ ಬೋರ್ಸ್‌ನಲ್ಲಿ ಇರಿಸಲಾಗುವುದು. ಇದರಲ್ಲಿ ಕಟ್ಟರ್‌ಗಳು, ಪಾಲಿಷರ್‌ಗಳು ಮತ್ತು ವ್ಯಾಪಾರಿಗಳು ಸೇರಿದಂತೆ 65,000 ಕ್ಕೂ ಹೆಚ್ಚು ವಜ್ರ ವೃತ್ತಿಪರರು ಕೆಲಸ ಮಾಡಲಿದ್ದಾರೆ. The Pentagon was the world's […]
ಚಂಡಮಾರುತ ಬಿಪರ್‌ಜೋಯ್ ಹಿನ್ನೆಲೆಯಲ್ಲಿ ಕಚ್ ಜಿಲ್ಲೆಯ 30000 ಕ್ಕೂ ಮಿಕ್ಕಿ ಸ್ಥಳೀಯರ ಸ್ಥಳಾಂತರ
ಅಹಮದಾಬಾದ್: ಬಿಪರ್‌ಜೋಯ್ ಚಂಡಮಾರುತವು ನಾಳೆ ಸಂಜೆ ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಪ್ರದೇಶ ಮತ್ತು ಪಕ್ಕದ ಪಾಕಿಸ್ತಾನದ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆಯಿದೆ. ಚಂಡಮಾರುತವು ಪ್ರಸ್ತುತ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ನೆಲೆಗೊಂಡಿದ್ದು ಪೋರಬಂದರ್‌ನಿಂದ ನೈಋತ್ಯಕ್ಕೆ 350 ಕಿಲೋಮೀಟರ್ ದೂರದಲ್ಲಿದೆ. ಚಂಡಮಾರುತ ಹಿನ್ನೆಲೆಯಲ್ಲಿ ಮಂಗಳವಾರ, ಗುಜರಾತ್‌ನ ಅಧಿಕಾರಿಗಳು ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಕರಾವಳಿ ಪ್ರದೇಶಗಳಿಂದ 37,800 ಜನರನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಹಲವಾರು ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ತಂಡಗಳು ಕಾರ್ಯಾಚರಣೆಗೆ ಸನ್ನದ್ದವಾಗಿವೆ. ಪರಿಹಾರ […]
ಬಿಪರ್‌ಜೋಯ್ ಚಂಡಮಾರುತ: ಮುಂಬೈ ವಿಮಾನ ಸಂಚಾರ ಅಸ್ತವ್ಯಸ್ತ; ಮುಂದಿನ ಪಯಣ ಗುಜರಾತ್ ನತ್ತ
ಮುಂಬೈ: ಬಿಪರ್‌ಜೋಯ್ ಚಂಡಮಾರುತ ಅರಬ್ಬಿ ಸಮುದ್ರದ ಮೇಲೆ ಬೀಸುತ್ತಿದ್ದು, ಹವಾಮಾನ ವೈಪರೀತ್ಯದಿಂದಾಗಿ ನಿನ್ನೆ ಸಂಜೆ ಮುಂಬೈನಲ್ಲಿ ವಿಮಾನ ಕಾರ್ಯಾಚರಣೆಗೆ ತೊಂದರೆಯಾಗಿದೆ. ಬಿಪರ್‌ಜೋಯ್ ಚಂಡಮಾರುತದ ತೀವ್ರತೆಯು “ಅತ್ಯಂತ ತೀವ್ರವಾದ ಚಂಡಮಾರುತ” ವಾಗಿ ಪರಿವರ್ತನೆ ಗೊಂಡಿದ್ದು, ಮುಂಬೈನಲ್ಲಿ ಭಾರೀ ಮಳೆ ಮತ್ತು ಗಾಳಿಯು ರಭಸದಿಂದ ಅಪ್ಪಳಿಸಿದೆ. ನೂರಾರು ಪ್ರಯಾಣಿಕರು ಗಂಟೆಗಟ್ಟಲೆ ತಮ್ಮ ವಿಮಾನಗಳಿಗಾಗಿ ಕಾಯುತ್ತಿದ್ದರಿಂದ ಮುಂಬೈ ವಿಮಾನ ನಿಲ್ದಾಣವು ಆತಂಕ ಮತ್ತು ಅವ್ಯವಸ್ಥೆಯ ದೃಶ್ಯಗಳಿಗೆ ಸಾಕ್ಷಿಯಾಯಿತು. ಹವಾಮಾನದ ಕಾರಣದಿಂದ ಹಲವಾರು ವಿಮಾನಗಳು ವಿಳಂಬಗೊಂಡು ಕೆಲವು ರದ್ದುಗೊಂಡವು. ಮತ್ತೆ ಕೆಲವು ಲ್ಯಾಂಡಿಗ್ […]