ಹಿಮಾಚಲ ಪ್ರದೇಶದ ರೀತಿ ಕರ್ನಾಟಕದಲ್ಲೂ ಬಿಜೆಪಿಯನ್ನು ಜನತೆ ಕಿತ್ತೊಗೆಯಲಿದ್ದಾರೆ: ಪ್ರಖ್ಯಾತ ಶೆಟ್ಟಿ
ಉಡುಪಿ: ಗುಜರಾತ್ ನಲ್ಲಿನ ಗೆಲವು ಭಾರತೀಯ ಜನತಾ ಪಕ್ಷಕ್ಕೆ ಮುಂದಿನ ಕರ್ನಾಟಕ ಚುನಾವಣೆಗೆ ದಿಕ್ಸೂಚಿಯಾದರೆ ಹಿಮಾಚಲ ಪ್ರದೇಶ ಚುನಾವಣೆ ಕೂಡ ಯಾಕೆ ದಿಕ್ಸೂಚಿಯಾಗಬಾರದೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಪ್ರಶ್ನಿಸಿದ್ದಾರೆ. ಈ ಹಿಂದಿನ ಚುನಾವಣೆಗಿಂತ ಗುಜರಾತ್ ನಲ್ಲಿ ಬಿಜೆಪಿ ಗೆದ್ದಿರುವುದರಲ್ಲಿ ಆಶ್ಚರ್ಯ ವೇನಿಲ್ಲ. ಆಮ್ ಆದ್ಮಿ ಪಕ್ಷದವರು ಸ್ಪರ್ಧೆ ಒಡ್ಡಿ ಕಾಂಗ್ರೆಸ್ ಮತಗಳನ್ನು ಪಡೆದುಕೊಂಡಿದ್ದಾರೆ. ಬಹುತೇಕ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಮತಗಳನ್ನೇ ಕಬಳಿಸಿದೆ. ಇದರಿಂದ ಗುಜರಾತ್ ನಲ್ಲಿ ಹಿನ್ನಡೆಯಾಗಿದೆ. ಕೇವಲ ಗುಜರಾತ್ […]
ಗುಜರಾತ್ ಚುನಾವಣೆ: ಡಿ. 1 ಮತ್ತು 5 ರಂದು ಮತದಾನ: ಡಿ. 8 ರಂದು ಮತ ಎಣಿಕೆ
ಅಹಮದಾಬಾದ್: ಗುಜರಾತಿನಲ್ಲಿ ಚುನಾವಣಾ ಕಣ ಸಜ್ಜಾಗಿದ್ದು, ಬಿರುಸಿನ ಪ್ರಚಾರಗಳಿಗೆ ತೆರೆಬಿದ್ದಿದ್ದು ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಇದೀಗ ಭಾರತೀಯ ಚುನಾವಣಾ ಆಯೋಗವು ಮತದಾನದ ದಿನಾಂಕಗಳನ್ನು ಘೋಷಣೆ ಮಾಡಿದೆ. ಇನ್ನೇನಿದ್ದರೂ ಮತದಾರ ಪ್ರಭುವಿನ ಮುದ್ರೆ ಒತ್ತುವಿಕೆ ಒಂದೇ ಬಾಕಿ ಉಳಿದಿದೆ. ಗುಜರಾತಿನ ಎಲ್ಲಾ 182 ವಿಧಾನಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ವಿಧಾನಸಭಾ ಚುನಾವಣೆ ಡಿಸೆಂಬರ್ 1 ರಂದು ನಡೆಯಲಿದ್ದು, ಎರಡನೇ ಹಂತ ಡಿಸೆಂಬರ್ 5 ರಂದು ನಡೆಯಲಿದೆ. ಡಿಸೆಂಬರ್ 8 ರಂದು […]