ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆ: ಕೆಳನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ಸೂರತ್ ಸೆಷನ್ಸ್ ನ್ಯಾಯಾಲಯ
ಸೂರತ್: 2019ರ ಮಾನನಷ್ಟ ಮೊಕದ್ದಮೆಯಲ್ಲಿ ತನಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೆಳ ನ್ಯಾಯಾಲಯದ ಆದೇಶಕ್ಕೆ ತಡೆ ಮತ್ತು ಅಮಾನತು ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಮನವಿಯನ್ನು ಸೂರತ್ ಸೆಷನ್ಸ್ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ. ಸೆಷನ್ಸ್ ನ್ಯಾಯಾಲಯವು ಏಪ್ರಿಲ್ 13 ರಂದು ಎರಡೂ ಕಡೆಯ ವಾದವನ್ನು ಆಲಿಸಿತ್ತು ಮತ್ತು ತೀರ್ಪನ್ನು ಏಪ್ರಿಲ್ 20 ಕ್ಕೆ ಕಾಯ್ದಿರಿಸಿತ್ತು. ಇಂದು ನ್ಯಾಯಾಲಯವು ರಾಹುಲ್ ಗಾಂಧಿಯ ದೋಷಾರೋಪಣೆಯನ್ನು ತಡೆಹಿಡಿದಿದ್ದರೆ ಅಥವಾ ಅಮಾನತುಗೊಳಿಸಿದ್ದರೆ, ಕಾಂಗ್ರೆಸ್ ನಾಯಕ ಸಂಸತ್ತಿಗೆ ಮರುಪ್ರವೇಶಿಸಬಹುದಿತ್ತು. ಕಾನೂನಿನಡಿಯಲ್ಲಿ ಇನ್ನೂ […]