ಒಂದು ನಿಮಿಷದಲ್ಲಿ 53 ಬಾರಿ ಬ್ಯಾಕ್ವರ್ಡ್ ಸ್ಟೆಪ್ಸ್ ಮಾಡಿ 9ನೇ ಗಿನ್ನೆಸ್ ದಾಖಲೆಗೆ ತನುಶ್ರೀ ಪಿತ್ರೋಡಿ ಪ್ರಯತ್ನ

ಉಡುಪಿ: ಯೋಗಬಾಲೆ ತನುಶ್ರೀ ಪಿತ್ರೋಡಿ 9ನೇ ಗಿನ್ನೆಸ್ ದಾಖಲೆಗೆ ಪ್ರಯತ್ನಿಸಿದ್ದಾಳೆ. ಉಡುಪಿಯ ಸೈಂಟ್ ಸಿಸಿಲೀಸ್ ಶಾಲೆಯ ಸಭಾಂಗಣದಲ್ಲಿ ತನ್ನ ಸಹಪಾಠಿಗಳ ಮತ್ತು ಗುರುಗಳ ಸಮ್ಮುಖದಲ್ಲಿ ಈ ಗಿನ್ನೆಸ್ ದಾಖಲೆಯ ಪ್ರಯತ್ನ ಯಶಸ್ವಿಯಾಗಿ ಸಂಪನ್ನಗೊಂಡಿತು. ತನುಶ್ರೀ ಇದುವರೆಗೆ ಒಟ್ಟು ಎಂಟು ವಿಶ್ವದಾಖಲೆಯನ್ನು ಮಾಡಿದ್ದು ಇದು ಒಂಭತ್ತನೇ ವಿಶ್ವದಾಖಲೆಯ ಪ್ರಯತ್ನವಾಗಿದೆ. ದೇಹದ ಹಿಂಭಾಗಕ್ಕೆ ಎರಡೂ ಕೈಗಳನ್ನು ಚಲಿಸಿ ಎರಡೂ ಕಾಲುಗಳನ್ನು ಸುತ್ತುವರಿದು ಮತ್ತೆ ಮುಂಭಾಗಕ್ಕೆ ಕೈಯ ಚಲನೆ ಮಾಡುವ ಭಂಗಿ ಮೋಸ್ಟ್ ಬ್ಯಾಕ್ವರ್ಡ್ ಸ್ಟೆಪ್ಸ್ ಇನ್ ಒನ್ ಮಿನಿಟ್ ಇದನ್ನು […]