ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಜಿ ಎಸ್ ಬಿ ಯುವಕ ಮಂಡಳಿಯ 52 ನೇ ವಾರ್ಷಿಕೋತ್ಸವ

ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಜಿ ಎಸ್ ಬಿ ಯುವಕ ಮಂಡಳಿಯ 52 ನೇ ವಾರ್ಷಿಕೋತ್ಸವ ಸೋಮವಾರ ಜರಗಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಬಳಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಮಾಹೆಯ ಹಿರಿಯ ಸಹಾಯಕ ಪ್ರಾಧ್ಯಾಪಕ ರವೀಂದ್ರ ಶೆಣೈ ಮಣಿಪಾಲ್ ಮಾತನಾಡುತ್ತಾ, ಶಿಕ್ಷಣ ಬೇರೆ ಸಂಸ್ಕಾರ ಬೇರೆ. ಯುವ ಜನತೆಗೆ ಸಂಸ್ಕಾರ ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ವೈದಿಕರು, ಸಮಾಜ ಬಾಂಧವರು ಹಾಗೂ ದೇವಸ್ಥಾನ ಆಡಳಿತ ಮಂಡಳಿ ಜೊತೆಯಾಗಿ ಸಮಾಜ ಸೇವೆ […]