ಗ್ರಾಪಂ ಚುನಾವಣೆ: ಉಡುಪಿ ಜಿಲ್ಲೆಯಲ್ಲಿ ಬಿರುಸಿನ ಮತದಾನ
ಉಡುಪಿ: ಜಿಲ್ಲೆಯ ಹೆಬ್ರಿ, ಉಡುಪಿ, ಬ್ರಹ್ಮಾವರ ಹಾಗೂ ಬೈಂದೂರು ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ್ ಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 9ಗಂಟೆಯ ವೇಳೆ ಶೇ. 14.37 ರಷ್ಟು ಮತದಾನ ನಡೆದಿದೆ. ಬೆಳಿಗ್ಗೆ 7ಗಂಟೆಯಿಂದ ಮತದಾನ ಆರಂಭಗೊಂಡಿದ್ದು, ಜನರು ಬೆಳಿಗ್ಗೆಯಿಂದಲೇ ಭಾರಿ ಉತ್ಸಾಹದಿಂದ ಮತಗಟ್ಟೆ ಆಗಮಿಸಿ ತಮ್ಮ ಮತ ಚಲಾವಣೆ ಮಾಡುತ್ತಿದ್ದಾರೆ. ಉಡುಪಿಯಲ್ಲಿ ಶೇ. 15.87, ಹೆಬ್ರಿಯಲ್ಲಿ ಶೇ. 15.47, ಬ್ರಹ್ಮಾವರ ಶೇ. 16.49 ಹಾಗೂ ಬೈಂದೂರಿನಲ್ಲಿ ಶೇ. 11.49 ರಷ್ಟು ಮತದಾನ […]