ರೈತರ ಪಾಲಿಗೆ ಹುಳಿಯಾದ ಒಣದಾಕ್ಷಿ: ತೀವ್ರ ಬೆಲೆ ಕುಸಿತದಿಂದಾಗಿ ಬೆಳೆಗಾರರು ಕಂಗಾಲು; ಸರ್ಕಾರಕ್ಕೆ ಮೊರೆ
ವಿಜಯಪುರ: ದ್ರಾಕ್ಷಿಯ ಬೆಳೆಗೆ ಹೆಸರುವಾಸಿಯಾದ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಒಣ ದ್ರಾಕ್ಷಿಯ ಬೆಲೆ ತೀವ್ರ ಕುಸಿತದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಕಳೆದ ವರ್ಷ ಒಣ ದ್ರಾಕ್ಷಿ ಕೆ.ಜಿಗೆ 150ರಿಂದ 250 ರೂ.ಗೆ ಮಾರಾಟವಾಗಿತ್ತು. ಈ ವರ್ಷ ಬೆಲೆ ತೀವ್ರ ಕುಸಿತ ಕಂಡಿದ್ದು, ದ್ರಾಕ್ಷಿ ಕೆ.ಜಿ.ಗೆ ಕೇವಲ 60ರಿಂದ 110 ರೂ.ಗೆ ಮಾರಾಟವಾಗುತ್ತಿದೆ ಎಂದು ಅಧಿಕಾರಿಗಳು ಮತ್ತು ಬೆಳೆಗಾರರ ಸಂಘದವರು ತಿಳಿಸಿದ್ದಾರೆ. ಇದರಿಂದ ಉತ್ಪಾದನಾ ವೆಚ್ಚವೂ ಸಿಗದೆ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ತೋಟಗಾರಿಕೆ ಇಲಾಖೆ ಮೂಲಗಳ ಪ್ರಕಾರ ರಾಜ್ಯದಲ್ಲಿ […]