ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಅರ್ಜಿ ಆಹ್ವಾನ

ಉಡುಪಿ : ಜಿಲ್ಲೆಯಲ್ಲಿ ಗ್ರಾಮ ಒನ್ ಯೋಜನೆಯು ಅನುಷ್ಠಾನಗೊಂಡಿದ್ದು, 193 ಗ್ರಾಮ ಒನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ 25 ಪಂಚಾಯತ್ ವ್ಯಾಪ್ತಿಗಳಾದ ಹಾರಾಡಿ, ಚಾಂತಾರು, ವರಂಗ, ಬಡಾ, ಕಟಪಾಡಿ, ಪಡುಬಿದ್ರಿ, ಶಿರ್ವ, ಬೆಳ್ಮಣ್, ಬಸ್ರೂರು, ನಿಟ್ಟೆ, ಕುಕ್ಕುಂದೂರು, ಕಾಳಾವರ, ಅಮಾಸೆಬೈಲು, ಕೋಟೇಶ್ವರ, ಗಂಗೊಳ್ಳಿ, ತೆಂಕನಿಡಿಯೂರು, ಪೆರ್ಡೂರು, ಅಲೆವೂರು, ಉದ್ಯಾವರ, ಆರೂರು, ಕಾಂತಾವರ, ನಂದಳಿಕೆ, ಶಿರ್ಲಾಲು, ಯಡಮೊಗೆ ಹಾಗೂ ಬಳ್ಕೂರು ವ್ಯಾಪ್ತಿಯಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು, ಸದರಿ ಬಾಕಿ ಕೇಂದ್ರಗಳ ಫ್ರಾಂಚೈಸಿ ಪಡೆಯಲು ಅರ್ಹ ಆಸಕ್ತ ಸಾರ್ವಜನಿಕರಿಂದ […]

ಜಿಲ್ಲೆಯಾದ್ಯಂತ ಗ್ರಾಮ ವನ್ ಕೇಂದ್ರಗಳನ್ನು ತೆರೆಯಲು ಅರ್ಜಿ ಅಹ್ವಾನ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 175 ಗ್ರಾಮ ವನ್ ಕೇಂದ್ರಗಳು ಪ್ರಾರಂಭಗೊಂಡು ಕಾರ್ಯನಿರ್ವಹಿಸುತಿದ್ದು, ಅಂಬಲಪಾಡಿ, ಕಲ್ಯಾಣಪುರ, ಕಡೇಕಾರ್, ಅಲೆವೂರು, ಸಾಣೂರು, ಮುಂಡ್ಕೂರು, ಬೆಳ್ಮಣ್, ಮರ್ಣೆ, ಬೇಳೂರು, ನಿಟ್ಟೆ, ಕುಕ್ಕುಂದೂರು, ಶಂಕರನಾರಾಯಣ, ಅಮಾಸೆಬೈಲು, ಹೆಜಮಾಡಿ, ಬಡಾ, ಕೊಕ್ಕರ್ಣೆ, ವರಂಗ, ಬೆಳ್ವೆ, ಉಪ್ಪುಂದ, ಶಿರೂರು, ಆರೂರು, ಮುದರಂಗಡಿ,ಕಾಂತಾವರ, ನಂದಳಿಕೆ, ಶಿರ್ಲಾಲು, ಎಡಮೊಗೆ, ಗುಲ್ವಾಡಿ, ಹಟ್ಟಿಯಂಗಡಿ, ಹಾರ್ದಳ್ಳಿ-ಮಂಡಳ್ಳಿ, ಕಿರಿಮಂಜೇಶ್ವರ, ಯಡ್ತಾಡಿ, ಕೋಟ, ಚಾಂತಾರು ಗ್ರಾಮ ಪಂಚಾಯತ್‌ಗಳಲ್ಲಿ ಗ್ರಾಮ ವನ್ ಕೇಂದ್ರಗಳನ್ನು ತೆರೆಯಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಈ ಗ್ರಾಮ […]

ಹಿರಿಯಡಕ ಗ್ರಾಮ ವನ್ ಕೇಂದ್ರದಲ್ಲಿ ಆಭಾ ನೋಂದಣಿ

ಹಿರಿಯಡಕ: ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯಡಕ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮ ವನ್ ಕೇಂದ್ರದಲ್ಲಿ ಆಭಾ (ಎ.ಬಿ.ಹೆಚ್.ಎ) ನೋಂದಣಿಯನ್ನು ಸೆ.19 ರಂದು ನಡೆಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಗ್ರಾಮ ಒನ್ ಕೇಂದ್ರಗಳಲ್ಲಿ ಸಾರ್ವಜನಿಕರಿಗಾಗಿ ವಿವಿಧ ಸೇವೆ ಲಭ್ಯ

ಉಡುಪಿ: ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಗ್ರಾಮ ಒನ್ ಯೋಜನೆಯಡಿ ಎಲ್ಲಾ ಗ್ರಾಮ ಒನ್ ಕೇಂದ್ರಗಳಲ್ಲಿ ಬೆಳೆ ವಿಮೆ, ವಿದ್ಯುತ್ ಬಿಲ್ ಪಾವತಿ, ಕೆ.ಎಸ್.ಆರ್.ಟಿ.ಸಿ ಬಸ್ ಟಿಕೆಟ್ ಬುಕ್ಕಿಂಗ್ ಸೌಲಭ್ಯಗಳನ್ನು ಪ್ರಾರಂಭಿಸಲಾಗಿದ್ದು, ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.