ಶಾಲೆಯ ಉಳಿವಿಗೆ ಸಹಕರಿಸುವ ವಿದ್ಯಾರ್ಥಿಗಳೇ ಶಾಲೆಯ ಆಸ್ತಿ: ಯಶಪಾಲ್ ಸುವರ್ಣ

   ಉಡುಪಿ: ತಾನು ಕಲಿತ ಶಾಲೆಯನ್ನು ಮರೆಯದೇ‌ ಆ ಶಾಲೆಯ ಉಳಿವಿಗೆ ಮತ್ತು ಬೆಳವಣಿಗೆಗೆ ನೆರವಾಗುವವರೆ ಶಾಲೆಯ ನಿಜವಾದ ಆಸ್ತಿ ಎಂದು ಶಾಸಕ ಯಶಪಾಲ್ ಸುವರ್ಣ ಅಭಿಪ್ರಾಯಪಟ್ಟರು. ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ನಿರೂಪಮಾ ಪ್ರಸಾದ್ ಶೆಟ್ಟಿ ದಂಪತಿಗಳು ಲಯನ್ಸ್ ಕ್ಲಬ್ ಮೂಲಕ ನಿರ್ಮಿಸಿಕೊಟ್ಟ ನೀರಿನ ಸಂಪನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಬಾಲ್ಯದಲ್ಲಿ ಶಾಲೆಯಿಂದ ಉಪಕೃತನಾದ ವಿದ್ಯಾರ್ಥಿ‌ ಮುಂದೆ ಆ ಶಾಲೆಯನ್ನು ಮರೆಯದೆ ಇತರ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಲು ಪ್ರತ್ಯಕ್ಷವಾಗಿ ಅಥವಾ […]