ಸರ್ಕಾರಿ, ಖಾಸಗಿ ಬಸ್ ಗಳ ದರ ಏಕಕಾಲದಲ್ಲಿ ಪರಿಷ್ಕರಿಸಿ: ರಾಜ್ಯ ಬಸ್ ಮಾಲೀಕರ ಒಕ್ಕೂಟ ಆಗ್ರಹ
ಉಡುಪಿ: ಡಿಸೇಲ್ ದರ ನಿರಂತರವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಹಾಗೂ ಖಾಸಗಿ ಬಸ್ ಗಳ ದರ ಪರಿಷ್ಕರಣೆ ಏಕಕಾಲದಲ್ಲಿ ಮಾಡುವಂತೆ ರಾಜ್ಯ ಸರಕಾರಕ್ಕೆ ಕರ್ನಾಟಕ ರಾಜ್ಯ ಬಸ್ ಮಾಲೀಕರ ಒಕ್ಕೂಟ ಆಗ್ರಹಿಸಿದೆ. ಸರ್ಕಾರಿ ಸೌಮ್ಯದ ಬಿಎಂಟಿಸಿ, ಕೆಎಸ್ಆರ್ ಟಿಸಿ, ಎನ್ ಡಬ್ಲೂಕೆಆರ್ ಟಿಸಿ, ಎನ್ ಇಕೆಆರ್ ಟಿಸಿ ಬಸ್ ದರವನ್ನು ಶೇ. 20ರಷ್ಟು ಹೆಚ್ಚಳ ಮಾಡಬೇಕೆಂದು ಮನವಿಯನ್ನು ಸಲ್ಲಿಸಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಸ್ ಮಾಲೀಕರ ಒಕ್ಕೂಟವು ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಸಾರಿಗೆ ಸಚಿವರ ಮತ್ತು ಅಧಿಕಾರಿಗಳ […]