ಭಾರತದ ನೆರವಿಗೆ ನಿಂತ ಗೂಗಲ್ ಸಿಇಒ ಸುಂದರ್ ಪಿಚೈ: ₹ 135 ಕೋಟಿ ನೆರವು

ನವದೆಹಲಿ: ಕೋವಿಡ್‍ ಎರಡನೇ ಅಲೆಗೆ ಸಿಲುಕಿ ನಲಗುತ್ತಿರುವ ಭಾರತಕ್ಕೆ ಗೂಗಲ್ ಸಿಇಒ ಸುಂದರ್ ಪಿಚೈ ನೆರವಿನ ಹಸ್ತ ಚಾಚಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸುಂದರ್ ಪಿಚೈ ಅವರು, ಭಾರತದಲ್ಲಿನ ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿ ನೋಡಿ ಮನಸ್ಸು ಒಡೆದುಹೋದಂತಾಗಿದೆ. ಗೂಗಲ್ ಈ ಕೂಡಲೇ ಭಾರತಕ್ಕೆ ವೈದ್ಯಕೀಯ ಸರಬರಾಜು, ಹೆಚ್ಚಿನ ಅಪಾಯದಲ್ಲಿರುವ ಸಮುದಾಯಗಳನ್ನು ಬೆಂಬಲಿಸುವ ಉದ್ದೇಶದಿಂದ ಮತ್ತು ನಿರ್ಣಾಯಕ ಮಾಹಿತಿಯನ್ನು ಹರಡಲು ಸಹಾಯ ಮಾಡುವ ಉದ್ದೇಶದಿಂದ 135 ಕೋಟಿ ರೂ ಅನುದಾನ ನೀಡಲಿದೆ ಎಂದಿದ್ದಾರೆ.