ಮಧ್ಯಪ್ರದೇಶದಲ್ಲಿ ಎರಡು ಗೂಡ್ಸ್ ರೈಲುಗಳ ನಡುವೆ ಅಪಘಾತ: ಮೂವರಿಗೆ ಗಾಯ
ಬಿಲಾಸ್ ಪುರ: ಸಿಗ್ನಲ್ ಓವರ್‌ಶೂಟ್‌ನಿಂದಾಗಿ ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಬುಧವಾರ ಎರಡು ಸರಕು ರೈಲುಗಳ ನಡುವೆ ಅಪಘಾತ ನಡೆದಿದ್ದು, ರೈಲುಗಳು ಹಳಿತಪ್ಪಿ ಬಿಲಾಸ್‌ಪುರ-ಕಟ್ನಿ ರೈಲು ಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿವೆ ಎಂದು ಬಿಲಾಸ್‌ಪುರ ರೈಲ್ವೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಗ್ಗೆ 6.50ರ ಸುಮಾರಿಗೆ ಸಿಂಗ್‌ಪುರ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಸಿಗ್ನಲ್ ಓವರ್‌ಶೂಟ್‌ನಿಂದ ರೈಲು ಹಳಿ ತಪ್ಪಿದೆ ಎಂದು ಹೆಚ್ಚಿನ ವಿವರಗಳನ್ನು ನೀಡದೆ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಪಘಾತ ನಡೆದ ಗೂಡ್ಸ್ ರೈಲುಗಳ ಕೆಲವು ವ್ಯಾಗನ್‌ಗಳು […]