ಕೊಂಡಾಡಿ: ಏ. 02ರಂದು ಶ್ರೀರಾಮ ಭಜನಾ ಮಂಡಳಿ ಭಜನೆಕಟ್ಟೆ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ
ಕೊಂಡಾಡಿ: ಶ್ರೀರಾಮ ಭಜನಾ ಮಂಡಳಿ ಕೊಂಡಾಡಿ ಭಜನಕಟ್ಟೆ ಸುವರ್ಣ ಸಂಭ್ರಮದ ಕಾರ್ಯಕ್ರಮಗಳ ಉದ್ಘಾಟನೆಯು ಶ್ರೀ ಶ್ರೀ ಈಶವಿಠಲದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಕೆಮಾರು ಸಾಂದೀಪನಿ ಸಾಧನಾಶ್ರಮ ಇವರ ಉಪಸ್ಥಿತಿಯಲ್ಲಿ ಏ. 02.ಆದಿತ್ಯವಾರದಂದು ಕೊಂಡಾಡಿ ಭಜನೆಕಟ್ಟೆಯಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ. ಸುವರ್ಣ ಸಂಭ್ರಮದ ಕಾರ್ಯಕ್ರಮಗಳ ಉದ್ಘಾಟನೆ, ಲಾಂಛನ ಬಿಡುಗಡೆ, ನೆನೆದವರ ಮನದಲ್ಲಿ ಭಜನೆಗೆ ಚಾಲನೆ ನೀಡಲಾಗುವುದು ಎಂದು ಶ್ರೀರಾಮ ಭಜನಾ ಮಂಡಳಿ, ಶ್ರೀರಾಮ ಮಹಿಳಾ ಭಜನಾ ಮಂಡಳಿ, ಕೊಂಡಾಡಿ ಭಜನಕಟ್ಟೆ ಪ್ರಕಟಣೆ ತಿಳಿಸಿದೆ.
ಕಲ್ಮಾಡಿ: ಆಗಸ್ಟ್ 15 ರಂದು ಸ್ಟೆಲ್ಲಾ ಮಾರಿಸ್ ಚರ್ಚಿನ ಸುವರ್ಣ ಮಹೋತ್ಸವದ ಸಂಭ್ರಮಾಚಣೆ
ಉಡುಪಿ: ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ 50 ನೇ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 15 ರಂದು ಸೋಮವಾರ ಬೆಳಗ್ಗೆ 09.00 ಗಂಟೆಗೆ ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಘೋಷಣೆಯಾಗಲಿದ್ದು, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ ಅಧಿಕೃತ ಘೋಷಣೆ ಮಾಡಲಿದ್ದಾರೆ. ಆಗಸ್ಟ್ 6 ರಿಂದ 14 ರ ವರೆಗೆ ಸಂಜೆ 4 ಗಂಟೆಗೆ ಆರಾಧನೆ, ಬಲಿಪೂಜೆ, ನೊವೆನಾ ಪ್ರಾರ್ಥನೆ ಮತ್ತು ವ್ಯಾಧಿಗ್ರಸ್ತರಿಗಾಗಿ ಪ್ರಾರ್ಥನೆ ಜರುಗಲಿದೆ. ಆಗಸ್ಟ್ 15 ಸೋಮವಾರದಂದು ಬೆಳಗ್ಗೆ 10.00 ಗಂಟೆಗೆ ಬಲಿಪೂಜೆ […]