ನೀಲಾವರ ಗೋಶಾಲೆಯಲ್ಲಿ ಗೋಕುಲಾಷ್ಟಮಿ
ಉಡುಪಿ: ನೀಲಾವರ ಗೋಶಾಲೆಯಲ್ಲಿ ಇರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಲ್ಲಿನ ಕಾಲೀಯ ಕೃಷ್ಣ ಸನ್ನಿಧಿಯಲ್ಲಿ ಗೋಕುಲಾಷ್ಟಮಿಯನ್ನು ಸರಳವಾಗಿ ಆಚರಿಸಿರು. ಗುರುವಾರ ಬೆಳಗ್ಗಿನಿಂದ ರಾತ್ರಿ ಪರ್ಯಂತ ಶ್ರೀರಾಮ – ಶ್ರೀ ಕಾಲೀಯ ಕೃಷ್ಣರಿಗೆ ವಿಶೇಷ ಅಭಿಷೇಕ, ಲಕ್ಷತುಲಸೀ ಅರ್ಚನೆ , ಪಾರಾಯಣ ಭಜನೆ ಪೂಜೆಗಳನ್ನು ನೆರವೇರಿಸಿದ ಶ್ರೀಗಳು, ರಾತ್ರಿ ಚಂದ್ರೋದಯಕಾಲದಲ್ಲಿ ಮತ್ತೆ ಶ್ರೀ ಕೃಷ್ಣ ನಿಗೆ ಮಹಾಪೂಜೆ ನೆರವೇರಿಸಿ ಸಮಸ್ತ ಲೋಕದ ಒಳಿತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶ್ರೀ ಕೃಷ್ಣಾರ್ಘ್ಯ, ತುಲಸೀ ಸನ್ನಿಧಾನದಲ್ಲಿ ಚಂದ್ರನಿಗೆ ಅರ್ಘ್ಯ […]