ಕಾಂಗ್ರೆಸ್ ಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಮಹೇಶ್ ಠಾಕೂರ್

ಉಡುಪಿ: ಖಾಸಗಿ ಕಾರ್ಯಕ್ರಮದ ನಿಮಿತ್ತ ಅ.8 ರಂದು ಉಡುಪಿ ನಗರಕ್ಕೆ ಆಗಮಿಸಿದ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಮಾಂಸಾಹಾರವನ್ನು ಸ್ವೀಕರಿಸಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬೇಟಿ ‌ನೀಡಿದ್ದಾರೆ ಎಂಬ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಸುಳ್ಳು ಆರೋಪವನ್ನು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಸರಾಸಗಟಾಗಿ ತಳ್ಳಿಹಾಕಿದ್ದಾರೆ. ಸನಾತನ ಹಿಂದೂ ಧರ್ಮದ ಪ್ರತಿಪಾದಕ, ಈ ಮಣ್ಣಿನ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಘನತೆ ಗೌರವದ ಸಂಪೂರ್ಣ ಅರಿವುಳ್ಳ ಹಿಂದುತ್ವದ ಐಕಾನ್ ಎಂದೆನಿಸಿರುವ ಡಾ. […]