ಸಮುದ್ರದೊಳಗಿನ ಈ ವಿಶೇಷ ಖನಿಜದಿಂದ ಭೂಗ್ರಹದ ಮೇಲೆ ಇಂಗಾಲದ ಪ್ರಮಾಣ ಇಳಿಕೆ? ಭೂಮಿಯನ್ನು ತಂಪಾಗಿಸುವ ಆ ಖನಿಜ ಯಾವುದು?

ನ್ಯೂಯಾರ್ಕ್: ಕೇಂಬ್ರಿಡ್ಜ್ ನ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯ ಭೂವಿಜ್ಞಾನಿಗಳು “ಸ್ಮೆಕ್ಟೈಟ್” ಎಂದು ಕರೆಯಲ್ಪಡುವ ವಿಶೇಷ ರೂಪದ ಮಣ್ಣಿನ ಖನಿಜವನ್ನು ಗುರುತಿಸಿದ್ದಾರೆ. ಇದು ಲಕ್ಷಾಂತರ ವರ್ಷಗಳಿಂದ ಇಂಗಾಲವನ್ನು ಸೆರೆಹಿಡಿಯುವ ಮತ್ತು ಸಂಗ್ರಹಿಸುವ ಗಮನಾರ್ಹ ಸಾಮರ್ಥ್ಯವನ್ನು ಹೊಂದಿದೆ ಮತ್ತಿದು ನಮ್ಮ ಭೂಗ್ರಹವನ್ನು ತಂಪಾಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಅಂದಾಜಿಸಲಾಗಿದೆ. ಸಮುದ್ರದ ತಳದ ಸಂಕೀರ್ಣ ಪದರಗಳಲ್ಲಿ ಕಂಡುಬರುವ, ಸ್ಮೆಕ್ಟೈಟ್‌ನ ಸಮರೂಪ ತರಹದ ರಚನೆಯು ಸಾವಯವ ಇಂಗಾಲವನ್ನು ಹಿಡಿದಿಡುವಲ್ಲಿ ಪ್ರವೀಣವಾಗಿದೆ. ಈ ಪ್ರಕ್ರಿಯೆಯು ಭೂತಟ್ಟೆಗಳ ಚಲನೆಯ ಉದಯದಿಂದಲೂ […]

ರಷ್ಯಾದ ಹೆಪ್ಪುಗಟ್ಟಿದ ಸರೋವರದಿಂದ 48,500 ವರ್ಷಗಳಷ್ಟು ಹಳೆಯ ವೈರಸ್ ಅನ್ನು ಪುನರುಜ್ಜೀವಗೊಳಿಸಿದ ಫ್ರೆಂಚ್ ವಿಜ್ಞಾನಿಗಳು

ಫ್ರೆಂಚ್ ವಿಜ್ಞಾನಿಗಳು ರಷ್ಯಾದಲ್ಲಿ ಹೆಪ್ಪುಗಟ್ಟಿದ ಸರೋವರದ ಅಡಿಯಲ್ಲಿ ಸಮಾಧಿಯಾಗಿದ್ದ 48,500 ವರ್ಷಗಳಷ್ಟು ಹಳೆಯದಾದ “ಜೊಂಬಿ ವೈರಸ್” ಅನ್ನು ಪುನರುಜ್ಜೀವನಗೊಳಿಸಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಫ್ರೆಂಚ್ ವಿಜ್ಞಾನಿಗಳು ಜೊಂಬಿ ವೈರಸ್‌ ಅನ್ನು ಪುನರುಜ್ಜೀವನಗೊಳಿಸಿ ಕೋವಿಡ್ ನಂತಹ ಮತ್ತೊಂದು ಜಾಗತಿಕ ಸಾಂಕ್ರಾಮಿಕ ರೋಗದ ಭಯವನ್ನು ಹುಟ್ಟುಹಾಕಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಈ ವೈರಸ್ ಅಧ್ಯಯನವನ್ನು ಉಲ್ಲೇಖಿಸಿದ್ದು, ಇದರ ವಿಮರ್ಷೆ ಇನ್ನೂ ಬಾಕಿ ಇದೆ ಎಂದಿದೆ. ಪ್ರಾಚೀನ ಅಜ್ಞಾತ ವೈರಸ್‌ನ ಪುನರುಜ್ಜೀವನದಿಂದ ಉಂಟಾಗುವ ಸಸ್ಯ, ಪ್ರಾಣಿ ಅಥವಾ ಮಾನವ ರೋಗಗಳ ಸಂದರ್ಭದಲ್ಲಿ ಪರಿಸ್ಥಿತಿಯು […]

ಯೂರೋಪಿನಲ್ಲಿ ಧಗೆಯಿಂದ ಹಾಹಾಕಾರ, ಚೀನಾದಲ್ಲಿ ಬರಗಾಲ, ಭಾರತದಲ್ಲಿ ಅತಿವೃಷ್ಟಿಯ ಜಲಧಾರೆ, ಅಮೇರಿಕಾದಲ್ಲಿ ಹಿಮದ ಮಳೆ: ಇದು ಜಾಗತಿಕ ಹವಾಮಾನ ಬದಲಾವಣೆಯ ಕಾಲ

ಒಂದೆಡೆ ಸದಾ ತಣ್ಣಗಿರುತ್ತಿದ್ದ ಯೂರೋಪಿನ ದೇಶಗಳಲ್ಲಿ ತಾಪಮಾನ 35 ಡಿಗ್ರಿ ಹೆಚ್ಚಾಗಿ ಜನ ಬೇಸಗೆಯ ಧಗೆಯಿಂದ ಹೈರಾಣಾಗುತ್ತಿದ್ದರೆ ಇತ್ತ ನೈರುತ್ಯ ಚೀನಾದಲ್ಲಿ ಜುಲೈ ಮಾಹೆಯಲ್ಲಿ ಪ್ರವಾಹವಿರಬೇಕಾದಲ್ಲಿ ಭಯಂಕರ ಬರಗಾಲ ತಾಂಡವವಾಡುತ್ತಿದೆ. ಬ್ರಿಟನ್ನಿನಲ್ಲಿ ಈಗಾಗಾಲೇ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನವು ದಾಖಲೆಯ 40ಡಿಗ್ರಿ ಮಾಪನವನ್ನು ತಲುಪಲಿದೆ ಎನ್ನಲಾಗಿದೆ. ಫ್ರಾನ್ಸ್ ಇಟಲಿಯ ಕಾಡುಗಳನ್ನು ಬೆಂಕಿಯ ಕೆನ್ನಾಲಿಗೆ ಆವರಿಸಿಕೊಂಡಿದೆ. ಇಟಲಿಯಲ್ಲಿ 70 ವರ್ಷಗಳ ಬಳಿಕ ಬರಗಾಲ ಕಂಡು ಬಂದಿದೆ. ಅಮೇರಿಕಾದಲ್ಲಿ ಮರಳಿನ ತೂಫಾನು ಆವರಿಸಿಕೊಂಡು ಹೈವೆಯಲ್ಲಿ ವಾಹನಗಳು ಸಂಚರಿಸಲೂ […]