ಕೆಎಂಸಿ ಮಣಿಪಾಲದಲ್ಲಿ ವೈದ್ಯಕೀಯ ತಳಿಶಾಸ್ತ್ರ ವಿಭಾಗ ಉದ್ಘಾಟನೆ: ಜೆನೆಟಿಕ್ ಸಂಶೋಧನೆ ಮತ್ತು ರೋಗಿಗಳ ಆರೈಕೆಯಲ್ಲಿ ಮೈಲಿಗಲ್ಲು ಸ್ಥಾಪನೆ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ತಳಿಶಾಸ್ತ್ರ ವಿಭಾಗವು(ಮೆಡಿಕಲ್ ಜೆನೆಟಿಕ್ಸ್) ತನ್ನ ಹೊಸ ಸೌಲಭ್ಯಗಳೊಂದಿಗೆ ಉದ್ಘಾಟನೆಗೊಂಡಿತು. ಇದು ಶಿಕ್ಷಣ, ಸಂಶೋಧನೆ ಮತ್ತು ರೋಗಿಗಳ ಆರೈಕೆಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. 12,000-ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಸೌಲಭ್ಯವು ಶೈಕ್ಷಣಿಕ ಉತ್ಕೃಷ್ಟತೆ ಮತ್ತು ವೈದ್ಯಕೀಯ ತಳಿಶಾಸ್ತ್ರದಲ್ಲಿನ ನಾವೀನ್ಯತೆಗಾಗಿ ವಿಭಾಗದ ಸಮರ್ಪಣೆಯನ್ನು ಉದಾಹರಿಸುತ್ತದೆ. ಈ ವಿಭಾಗವು ಡಿಎಂ (ಮೆಡಿಕಲ್ ಜೆನೆಟಿಕ್ಸ್), ಎಂಎಸ್ಸಿ (ಜೆನೆಟಿಕ್ ಕೌನ್ಸೆಲಿಂಗ್), ಮತ್ತು ಡಾಕ್ಟರ್ ಆಫ್ ಫಿಲಾಸಫಿ ಪದವಿಗಳಂತಹ ವಿಶೇಷ ಕಾರ್ಯಕ್ರಮಗಳನ್ನು ನೀಡಲಿದೆ. ಎಂಎಸ್ಸಿ(ಜೆನೆಟಿಕ್ ಕೌನ್ಸೆಲಿಂಗ್) ಪಠ್ಯಕ್ರಮವು ಭಾರತದಲ್ಲಿ […]