ಬಡಗನ್ನೂರು: ಗೆಜ್ಜೆಗಿರಿ ಮೇಳದ ಉದ್ಘಾಟನೆ ಹಾಗೂ ದೇವರ ಪ್ರಥಮ ಸೇವೆ ಆಟ ಪ್ರಾರಂಭ

ಬಡಗನ್ನೂರು: ಗೆಜ್ಜೆಗಿರಿ ದೇಯಿಬೈದಿತಿ ಕೋಟಿ-ಚೆನ್ನಯ ಮೂಲ ಸ್ಥಾನದಲ್ಲಿ ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದಿತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಗೆಜ್ಜೆಗಿರಿ ಮೇಳದ ಉದ್ಘಾಟನೆ ಹಾಗೂ ದೇವರ ಪ್ರಥಮ ಸೇವೆ ಆಟವು ಭಾನವಾರದಂದು ನಡೆಯಿತು. ಸೋಲೂರು ಮಠದ ಆರ್ಯ-ಈಡಿಗ(ಬಿಲ್ಲವ) ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ಯಕ್ಷಗಾನ ಕಲೆ ಈ ದೇಶದ ಸಂಸ್ಕೃತಿ ಮತ್ತು ಕಲೆಯನ್ನು ಪ್ರಚುರ ಪಡಿಸುತ್ತದೆ. ಗೆಜ್ಜೆಗಿರಿಯ ದೇಯಿ ಬೈದೆತಿಯ ಮಣ್ಣಿನಲ್ಲಿ ಯಕ್ಷಗಾನದ ಮೇಳವೊಂದು ಪ್ರಾರಂಭಗೊಂಡಿರುವುದು ಪುಣ್ಯದ ಕ್ಷಣ ಎಂದು […]