ಗಾಂಧೀಜಿ ಮರಿ ಮೊಮ್ಮಗಳಿಗೆ ಏಳು ವರ್ಷ ಜೈಲು ಶಿಕ್ಷೆ
ಜೊಹಾನ್ಸ್‌ಬರ್ಗ್: ಹಣಕಾಸು ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಮಾಡಿದ ಆರೋಪಕ್ಕೆ ಸಂಬಂಧಿಸಿ ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದ ಡರ್ಬನ್ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಗಾಂಧಿ ಮರಿ ಮೊಮ್ಮಗಳು ಆಶಿಶ್ ಲತಾ ರಾಮ್‌ಗೋಬಿನ್ (56) ಶಿಕ್ಷೆಗೆ ಗುರಿಯಾಗಿದ್ದಾರೆ. ಇವರು ಆರು ದಶಲಕ್ಷ ಆಫ್ರಿಕನ್ ರಾಂಡ್ ( ಅಂದಾಜು ₹3.22 ಕೋಟಿ) ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿದ ಆರೋಪ ಎದುರಿಸುತ್ತಿದ್ದಾರೆ. ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ತಾವು ಆಮದು ಮಾಡಿಕೊಳ್ಳುತ್ತಿದ್ದ […]