ಅ.15 ರಿಂದ ಅ.24 ರ ವರೆಗೆ ದ್ವಿತೀಯ ವರ್ಷದ ಉಚ್ಚಿಲ ದಸರಾ: ಮೈಸೂರು ದಸರಾ ಮಾದರಿಯಲ್ಲಿರಲಿದೆ ಕಾರ್ಯಕ್ರಮಗಳು!!

ಕಾಪು: ಅ.15 ರಿಂದ 24 ರ ವರೆಗೆ ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ ದ್ವಿತೀಯ ಉಚ್ಚಿಲ ದಸರಾ ಕಾರ್ಯಕ್ರಮವು ಸಂಭ್ರಮದಿಂದ ಜರುಗಲಿದ್ದು, ಅದರ ಪೂರ್ವಾಭಾವಿ ಸಭೆಯು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ. ಜಿ.ಶಂಕರ್ ಅಧ್ಯಕ್ಷತೆಯಲ್ಲಿ ಜರುಗಿತು. ಕಳೆದ ವರ್ಷ ಜೀರ್ಣೋದ್ಧಾರ ನಡೆದ ಬಳಿಕ ಕ್ಷೇತ್ರವು ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆಯುತ್ತಿದೆ. ಈ ಬಾರಿ ಮೈಸೂರು ದಸರಾ ಮಾದರಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಲು ಉದ್ದೇಶಿಸಲಾಗಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ ಕ್ಷೇತ್ರದ ಜೀರ್ಣೋದ್ಧಾರದ […]
ರಾಷ್ಟ್ರಮಟ್ಟದ ಫ್ಲವರ್ ಡೆಕೋರೇಟರ್ಸ್ ಎಕ್ಸ್ ಪೋ ಆಯೋಜಿಸಿ ದೇಶದ ಗಮನ ಸೆಳೆಯಿರಿ: ರಘುಪತಿ ಭಟ್

ಉಡುಪಿ: ಜನವರಿಯಲ್ಲಿ ರಾಷ್ಟ್ರಮಟ್ಟದ ಫ್ಲವರ್ ಡೆಕೋರೇಟರ್ಸ್ ಎಕ್ಸ್ ಪೋ ಆಯೋಜಿಸುವ ಮೂಲಕ ಜಿಲ್ಲೆಯು ದೇಶದಲ್ಲೇ ವಿಶಿಷ್ಟ ರೀತಿಯಲ್ಲಿ ಗಮನ ಸೆಳೆಯುವಂತೆ ಮಾಡುವ ಯೋಜನೆ ರೂಪಿಸಬೇಕು ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು. ಭಾನುವಾರ ಉಡುಪಿಯಲ್ಲಿ ಜಿಲ್ಲಾ ಫ್ಲವರ್ ಡೆಕೋರೇಟರ್ಸ್ ಮಾಲಕರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಡಾ ಜಿ. ಶಂಕರ್ ಅವರ ಸಲಹೆಯಂತೆ ಜಿಲ್ಲಾಡಳಿತ ಮತ್ತು ರಜತ ಮಹೋತ್ಸವ ಸಮಿತಿ ಸಹಕಾರದಲ್ಲಿ ಎಕ್ಸ್ ಪೋ ಆಯೋಜನೆ ಮಾಡಬೇಕು. ಇದಕ್ಕೆ ಸಂಪೂರ್ಣ […]