ಉಡುಪಿ ಯಶೋದಾ ಆಟೊ ಯೂನಿಯನ್ ನಿಂದ ಉಚಿತ ಆಟೊ ಸೇವೆ: ಈ ಸೇವೆ ಎಲ್ಲೆಲ್ಲಿ ಸಿಗಲಿದೆ.?, ಸಂಪರ್ಕ ಸಂಖ್ಯೆ.? ಈ ಮಾಹಿತಿ ಇಲ್ಲಿದೆ.
ಉಡುಪಿ: ಯಶೋದಾ ಆಟೊ ಚಾಲಕರ ಮತ್ತು ಮಾಲೀಕರ ಉಡುಪಿ ಜಿಲ್ಲಾಧ್ಯಕ್ಷ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಯಶೋದಾ ಆಟೊ ಯೂನಿಯನ್ ವತಿಯಿಂದ ವೈದ್ಯಕೀಯ ಮತ್ತು ಇತರ ತುರ್ತು ಸೇವೆಗಾಗಿ ಉಚಿತ ಆಟೊ ಸೇವೆಯನ್ನು ಆರಂಭಿಸಲಾಗಿದೆ. ಉಡುಪಿ ನಗರ ಸಭಾವ್ಯಾಪ್ತಿ ಹಾಗೂ ಗ್ರಾಮಾಂತರ ಮಟ್ಟದಲ್ಲಿ ಜನರ ತುರ್ತು ಆರೋಗ್ಯ ಸಮಸ್ಯೆಗಳಿಗಾಗಿ ಉಚಿತ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಸೇವೆಯನ್ನು ಜಾರಿಗೊಳಿಸಲಾಗಿದೆ. ವಾರ್ಡ್ ಗೆ ಎರಡರಂತೆ 37 ಆಟೊಗಳು ಉಚಿತ ಸೇವೆಯನ್ನು ಜನತೆಗೆ ನೀಡುತ್ತಿವೆ. […]